
ಯಲ್ಲಾಪುರ: ಇದೀಗ ಪೂರ್ಣ ಪ್ರಮಾಣದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ದಿಶೆಯಲ್ಲಿ ಹಳೆಯ ಸಮಿತಿಗಳನ್ನು ವಿಸರ್ಜಿಸಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಮುನಾಪ್ ಮಿರ್ಜಾನಕರ್ ಹೇಳಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , . ವಿವಿಧ ಕಾರಣಗಳಿಂದ ಪಕ್ಷ ಹಿನ್ನೆಡೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ತಟಸ್ಥವಾಗಿದ್ದು,ಸದ್ಯದಲ್ಲಿಯೇ ಪೂರ್ಣ ಪ್ರಮಾಣದ ಸಮಿತಿ ರಚಿಸಲಾಗುವುದು. ಚುನಾವಣೆ ಬಂದಾಗ ಹೊರಗಿನಿಂದ ಬಂದ ಅಭ್ಯರ್ಥಿಗಳು ಸ್ಪರ್ದಿಸುವದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿತ್ತು. ಈ ಬಗ್ಗೆ ಕುಮಾರಣ್ಣ ಅವರಿಗೆ ಮನವರಿಕೆ ಮಾಡಲಾಗಿದೆ. ಅವರು ಸ್ಥಳೀಯ ಅಭ್ಯರ್ಥಿಗಳನ್ನು ಕಾರ್ಯಕರ್ತರ ಅನುಮತಿಯಂತೆ ಆಯ್ಕೆ ಮಾಡಿ, ಕ್ಷೇತ್ರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಸ್ಥಳೀಯವಾಗಿ ನಾಯಕತ್ವ ಇಲ್ಲದೇ ಕಾರ್ಯಕರ್ತರು ತಟಸ್ಥರಾಗಿದ್ದಾರೆ. ವಲಸೆ
ಹೊದವರನ್ನು ತಟಸ್ಥ ಇರುವವರನ್ನು ಮರಳಿ ಕರೆತಂದು ಪಕ್ಷವನ್ನು ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಮುಂದಾಳತ್ವದಲ್ಲಿ ಬಲವರ್ಧನೆ ಮಾಡಲಾಗುವುದು ಎಂದರು.
ಕ್ಷೇತ್ರಾಧ್ಯಕ್ಷ ಮುತ್ತಣ್ಣ ಸಂಗೂರಮಠ ಮಾತನಾಡಿ, ಕಾಂಗ್ರೆಸ್ ಬಿಜೆಪಿ ಯಾವದೇ ಪಕ್ಷಕ್ಕೂ ಸೇರದೆ ನಮ್ಮ ತಟಸ್ಥರಾಗಿದ್ದ ಅಂತಹ ಕಾರ್ಯಕರ್ತರು ಇದ್ದಾರೆ.ಅವರ ಮನವೊಲಿಸಿ,ಸಕ್ರಿಯತೆಯಿಂದ ಪಕ್ಷ ಸಂಘಟನೆ ಮಾಡಲಾಗುವದು . ನಾಯಕರು ಪಕ್ಷಕ್ಕೆ ವಂಚಿಸಿದರೂ, ಕಾರ್ಯಕರ್ತರು, ನಿಷ್ಠಾವಂತರು ಜೆಡಿಎಸ್ ನಲ್ಲಿಯೇ ಇದ್ದಾರೆ. ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ ಅರ್ಜಿ ಹಾಕದೇ ಇದ್ದರೂ ಎಲ್ಲ ರೈತರ ಸಾಲ ಮನ್ನಾ ಮಾಡಿದ್ದರು. ಅವರ ರೈತಪರ ಕಾಳಜಿ ಜನರು ಮರೆತಿಲ್ಲ ಎಂದರು. ಪಕ್ಷದ ತಾಲೂಕು ಅಧ್ಯಕ್ಷ ಬೆನಿತ್ ಸಿದ್ದಿ ಮಾತನಾಡಿ, ಕುಮಾರಣ್ಣ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡಿ ಮತ್ತೆ ಪಕ್ಷ ಬಲಪಡಿಸಲಾಗುವುದು ಎಂದರು. ಮುಂಡಗೋಡ ತಾಲೂಕು ಅಧ್ಯಕ್ಷ ತುಕಾರಾಮ ಗಡಕರ್, ಉಪಾಧ್ಯಕ್ಷ ನಾಗರಾಜ ತಳವಾರ, ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮ್ಮದ್ ಗುರನಳ್ಳಿ ಯಲ್ಲಾಪುರ ಉಪಾಧ್ಯಕ್ಷ ಸುಧಾಕರ ನಾಯ್ಕ ಮಂಚಿಕೇರಿ ಇದ್ದರು.
Leave a Comment