
ಯಲ್ಲಾಪುರ : ಪ್ರಧಾನ ಮಂತ್ರಿ ನರೇಂದ್ರ ಮೊದಿಯವರಿಗೆ ಆಯುರೋಗ್ಯ ಹಾಗೂ ದೀರ್ಘಯುಷ್ಯ ಕೋರಿ ಯಲ್ಲಾಪುರ ತಾಲೂಕಿನ ಭಾ ಜಾ ಪ ಮಹಿಳಾ ಮೊಚಾ೯ ವತಿಯಿಂದ ಶುಕ್ರವಾರ ಪಟ್ಟಣದ ಈಶ್ವರಗಲ್ಲಿ ಯಲ್ಲಿರುವ ಈಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮೃತ್ಯುಂಜಯ ಜಪವನ್ನು ಜಪಿಸಿದರು.ಮೋದಿಜಿ ಪಂಜಾಬ ರಾಜ್ಯ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆದ ಭದ್ರಾತಾ ಲೋಪ ಆಗಿ ಪ್ರಾಣಪಾಯದಿಂದಪಾರಗಿದ್ದಾರೆ.ಈ ರೀತಿ ಮುಂದೆ ನಡೆಯದಂತೆ ಮೊದಿಜೀ ಯವರ ಪ್ರಾಣಕ್ಕೆ ಯಾವದೇ ಕಂಟಕ ಬಾರದಿರಲಿ ಎಂದು ಪ್ರಾರ್ಥಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಭಟ್ಟ.ಮಹಿಳಾಮೋರ್ಚಾ ಮಂಡಲಾಧ್ಯಕ್ಷೆ ಶೃತಿ ಹೆಗಡೆ, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ನಾಯ್ಕ.
ಪ್ರಧಾನಕಾರ್ಯದರ್ಶಿ ಸವಿತಾ ಜಮಗುಳಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುನಿತಾ ವೆರ್ಣೇಕರ ಸಂಪದಾ ನಾಯ್ಕ ರಜನೀ ಚಂದ್ರಶೇಖರ ಶಶಿಕಲಾ ಅಂಬಿಗ ಯಲ್ಲಾಪುರ ಮಂಡಲದ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ್,ಪಟ್ಟಣ ಪಂಚಾಯತ್ ಸದಸ್ಯ ಆದಿತ್ಯ ಗುಡಿಗಾರ, ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ , ಗ್ರಾ ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಹಳೆಮನೆ,
ವಿಶ್ವನಾಥ ಜಂಬಗುಳಿ.ಗಜಾನನ ನಾಯ್ಕ,ಈಶ್ವರ್ ದಾಸ್ ಕೊಪ್ಪೆ ಸರ್ ಇದ್ದರು.
Leave a Comment