ಭಟ್ಕಳ: ತಾಲೂಕಿನ ಜಗದ್ವಿಖ್ಯಾತ ಮುರುಡೇಶ್ವರಕ್ಕೆ ಸ್ಯಾಂಡಲ್‌ವುಡ್ ನಟ ದೂದ್‌ಪೇಡ ದಿಗಂತ್ ಭೇಟಿ ನೀಡಿ, ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಸುಮಾರು 2 ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿ ಸಂಭ್ರಮಿಸಿದರು.
ತಂದೆ – ತಾಯಿಯ ಜತೆ ಮುರುಡೇಶ್ವರಕ್ಕೆ ಆಗಮಿಸಿದ್ದ ದಿಗಂತ್, ನೇತ್ರಾಣಿ ಅಡ್ವೆಂಚರ್ಸ್‌ನ ಡೈವರ್ಗಳೊಂದಿಗೆ ನೇತ್ರಾಣಿ ನಡುಗಡ್ಡೆಗೆ ತೆರಳಿ ಸ್ಕೂಬಾ ಡೈವಿಂಗ್ ಮಾಡಿದರು. ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ ಹರಿಕಂತ್ರ ದಿಗಂತ್ ಕುಟುಂಬಕ್ಕೆ ಸ್ಕೂಬಾ ಡೈವ್ ಮಾಡಲು ಮಾರ್ಗದರ್ಶನ ಮಾಡಿದರು. ಈ ವೇಳೆ, ಕಡಲಾಳದಲ್ಲಿನ ಅಚ್ಚರಿಗಳನ್ನ ಕಣ್ತುಂಬಿಕೊಂಡರು. ಹವಳದ ದಿಬ್ಬಗಳು, ಅಪರೂಪದ, ಬಣ್ಣ ಬಣ್ಣದ ಮೀನುಗಳನ್ನ ನೋಡಿ ಖುಷಿ ಪಟ್ಟರು.
ಮಾಲ್ಡೀವ್ಸ್ನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಅನುಭವ ಹೊಂದಿದ್ದ ದಿಗಂತ್, ಎಸ್‌ಎಸ್‌ಐ ಸರ್ಟಿಫಿಕೇಟ್ ಹೊಂದಿದ್ದಾರೆ. ಮೊದಲ ಬಾರಿ ಸುಮಾರು 18 ಮೀ. ಆಳದಲ್ಲಿ 28 ನಿಮಿಷಗಳ ಕಾಲ ದಿಗಂತ್ ಡೈವಿಂಗ್ ಮಾಡಿದರು. ಇದಾದ ನಂತರ 2ನೇ ಬಾರಿ ಮತ್ತೆ 18 ಮೀ. ಆಳದಲ್ಲಿ 53 ನಿಮಿಷಗಳ ಕಾಲ ಡೈವಿಂಗ್ ಮಾಡಿದರು.
Leave a Comment