
ಯಲ್ಲಾಪುರ :ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ವಿಶಿಷ್ಟ ಕತ್ತನಯುಳ್ಳ ಕಾಷ್ಠಶಿಲ್ಪವನ್ನೋಳಗೊಂಡ ನಿರ್ಮಿಸಲಾಗಿರುವ ಬೃಹತ ರಥವು ಹರಿಹರದ ರಾಜನಹಳ್ಳಿಯ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥದ ಕಾರ್ಯವು ಪೂರ್ಣಗೊಂಡಿದೆ .೭೦ಅಡಿ ಎತ್ತರದ ಸುಂದರ ಕೆತ್ತನೆಯಸಂಪೂರ್ಣ ರಾಮಾಯಣ ಕಥಾಹಂದರವನ್ನು ಹೊಂದಿದ ರಾಜ್ಯದಲ್ಲಿಯೇ ಪ್ರಥಮವಾದ ಬೃಹತ ರಥವೆನ್ನಬಹುದಾಗಿದೆ.

. ಹಲವು ದಶಕಗಳಿಂದ ತಮ್ಮ ಕಲೆಯಿಂದ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ತಮ್ಮ ಕಲೆಯ ಶ್ರೀಮಂತಿಕೆ ಸಾರಿರುವ ಬಿಕ್ಕು ಗುಡಿಗಾರ ಕುಟುಂಬದ ಸಹೋದರರಾದ ಸಂತೋಷ ಹಾಗೂ ಅರುಣ ಗುಡಿಗಾರ ಅವರ ನೇತೃತ್ವದಲ್ಲಿ ಸಿದ್ದಗೊಂಡಿರುವ ಈ ರಥವು ತನ್ನಲ್ಲಿಯೇ ಹಲವು ವಿಶೇಷತೆಗಳನ್ನೊಳಗೊಂಡಿದೆ

ರಂಜಲ, ವಾಟೆ, ಹೊನ್ನೆ ಹಾಗೂ ಕೆತ್ತನೆಗೆ ಸಾಗವಾನಿ ಮರಗಳ ಕಟ್ಟಿಗೆ ಬಳಸಲಾಗಿದೆ. ರಾಮಾಯಣದ ಪ್ರಮುಖ ಸನ್ನಿವೇಶದ ಕೆತ್ತನೆಗಳು ಕಣ್ಣ ಮುಂದೆ ರಾಮಾಯಣದ ಚಿತ್ರಣವನ್ನೇ ಸೃಷ್ಟಿಸಿದ ನೈಪುಣ್ಯತೆ ಇವರದ್ದಾಗಿದೆ. ರಥದ ಸುತ್ತಲೂ ಸಂಪೂರ್ಣ ವಾಲ್ಮೀಕಿ ರಾಮಾಯಣದ ಪುತ್ರ ಕಾಮೇಷ್ಟಿ ಯಾಗದಿಂದ ಹಿಡಿದು, ಅವ ಕುಶರವರೆಗಿನ 33 ಅಕರ್ಷಕ ಚಿತ್ರಗಳನ್ನು ಕತ್ತಲಾಗಿದೆ.ರಾಮಾಯಣದ ಬಗ್ಗೆ, ಕಲೆಯ ಬಗ್ಗೆ ಅಧ್ಯಯನ ಮಾಡಿ, ನಿಖರ ವಾಸ್ತುಶಿಲ್ಪದ ಪ್ರಕಾರ ರಥವನ್ನು ನಿರ್ಮಿಸಲಾಗಿದೆ. ರಥದ ಮುಖ್ಯಭಾಗವನ್ನು ಯಲ್ಲಾಪುರದ ಸಿದ್ದಪಡಿಸಲಾಗಿದೆ.
ಸುಮಾರು 40 ಅಡಿ ಎತ್ತರದ ರಥದಗಡ್ಡೆ ನಿರ್ಮಾಣವಾಗುತ್ತಿದ್ದು, ಪತಾಕೆ,
ಕಲಶ ಸೇರಿ ಒಟ್ಟು ಸುಮಾರು 70 ಅಡಿ
ಎತ್ತರ ಇರಲಿದೆ. ರಥದ ನಿರ್ಮಾಣಕ್ಕಾಗಿಯೇ ಬಳಸಲಾಗುವ ವಿಶೇಷ ಜಾತಿಯ ರಂಜಲ್ ಎಂಬ ಕಟ್ಟಿಗೆಯಿಂದ ರಥದ ಮೈಕಟ್ಟನ್ನು ನಿರ್ಮಿಸಲಾಗಿದ್ದು,ಅಗಮ ಶಾಸ್ತ್ರದ ವಾಸ್ತು ನಿಯಮದಂತೆ ರಥವನ್ನು ನಿರ್ಮಾಣ ಮಾಡಲಾಗಿದೆ.

ಸುಮಾರು ೭೦ ಅಡಿ ಎತ್ತರದ ರಥದಲ್ಲಿ ೩೫ ಅಡಿಯಷ್ಟು ಈ ಕಟ್ಟಿಗೆಯ ಕಲಾಕೃತಿಗಳಿದ್ದು, ಸುಮಾರು ೧೫ ಜನರ ತಂಡವು ೨ ವರ್ಷಗಳ ಕಾಲ ಶ್ರಮವಹಿಸಿ ರಥದ ನಿರ್ಮಾಣ ಮಾಡಿರುತ್ತಾರೆ. ರಥಕ್ಕೆ ಆರು ಚಕ್ರಗಳಿದ್ದು, ತಲಾ ಒಂಬತ್ತು ಅಡಿ ಎತ್ತರ ಇವೆ. ಗಡ್ಡೆ 17 ಅಡಿ, ಗಡ್ಡೆಯ ಮೇಲಿನ ಮಂಟಪದ ಪೀಠ ಐದು ಅಡಿ, ಮಂಟಪ ಒಂಬತ್ತು ಅಡಿ ಇದೆ. ಕಬ್ಬಿಣದ ಚಕ್ರಗಳನ್ನು ಅಳವಡಿಸಲಾಗುತ್ತಿದ್ದು, ಅಧುನಿಕ ತಾಂತ್ರಿಕತೆ ಬಳಸಿ ತನ್ನಿಂದ ತಾನೇ ರಥ ನಿಧಾನವಾಗಿ ಚಲಿಸುವಂತೆ ಚಕ್ರದ ಭಾಗವನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ರಥದ ಭಾರವನ್ನು ಎಳೆಯಲು ಸುಲಭೀಕರಿಸಲು, ಹೈಡ್ರಾಲಿಕ್ ಸಸ್ಪೆನ್ಷನ್ನೊಂದಿಗೆ ಯಾಂತ್ರಿಕೃತಗೊಳಿಸಲಾಗಿದೆ.
ರಥದ ಜವಾಬ್ದಾರಿ ಹೊತ್ತಿದ್ದ ಪ್ರವಾಸೋದ್ಯಮ & ಪರಿಸರ ಖಾತೆ ಸಚಿವ ಆನಂದ ಸಿಂಗ್ ಕಳೆದ ಅಗಸ್ಟ್ ತಿಂಗಳಲ್ಲಿ ಹರಿಹರದ ರಾಜನಹಳ್ಳಿಯ ಮಠಾಧೀಶರಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳೊಂದಿಗೆ ಕಲಾ ಕೇಂದ್ರಕ್ಕೆ ಭೇಟಿ ನೀಡಿ, ರಥದ ನಿರ್ಮಾಣ ಕಾರ್ಯದ ಪರಿಶೀಲನೆ ನಡೆಸಿದ್ದರು. . ರವಿವಾರ ಬೃಹತ್ ವಾಹನದ ಮೂಲಕ ಯಲ್ಲಾಪುರದಿಂದ ಹೊಸಪೇಟೆಗೆ ಸಾಗಿಸಲಾಯಿತು.ರಥದ ಉಸ್ತುವಾರಿ ವಹಿಸಿದ್ದ ಸಚಿವ ಆನಂದ್ ಸಿಂಗ್ ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡು ವಾಲ್ಮೀಖಿ ಮಠಕ್ಕೆ ಹಸ್ತಾಂತರಿಸಲಿದ್ದು ಭವ್ಯ ಮೆರವಣಿಗೆಯಲ್ಲಿ ರಾಜನಹಳ್ಳಿಗೆ ತೆರಳಲಿದೆ. ಅಲ್ಲಿಯೇ ರಥದ ಜೋಡಣೆ ಕಾರ್ಯ ನಡೆಯಲಿದ್ದು, ಅಂದಾಜು ಒಂದು ತಿಂಗಳ ಕಾಲ ಹಿಡಿಯಲಿದೆ.
Leave a Comment