
ಯಲ್ಲಾಪುರ :
ಜನವರಿ 12 ವಿವೇಕಾನಂದ ಜಯಂತಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಪಟ್ಟಣದ ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ್ ಟ್ರಸ್ಟ್, ಯಲ್ಲಾಪುರ ಉತ್ತರ ಕನ್ನಡ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ವಿದ್ವಾನ್ ಗಣಪತಿ ಭಟ್ಟ ಕೋಲಿ ಬೇಣ
ಸಂಸ್ಕೃತ ವಿದ್ವಾಂಸರು ಹಾಗೂ ಕಾರ್ಯದರ್ಶಿಗಳು ಗೋವರ್ಧನ ಗೋ ಸೇವಾ ಸಮಿತಿ ಕರಡೊಳ್ಳಿ ಯಲ್ಲಾಪುರ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 5. 30 ಕ್ಕೆ ಯೋಗ ತರಗತಿ ಕಾರ್ಯಕ್ರಮದಲ್ಲಿ ವಿಶೇಷ ಸೂರ್ಯ ನಮಸ್ಕಾರ, ಯೋಗ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಉಪನ್ಯಾಸ ಹಾಗೂ ಅಗ್ನಿಹೊತ್ರ ಹೋಮ ಹಮ್ಮಿಕೊಂಡು ಏಳು ಗಂಟೆಗೆ ಆಭಾರ ಮನ್ನಣೆ ನಡೆಯಲಿದೆ. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್. ವಿ ಹೆಗಡೆ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಯವರು ತಿಳಿಸಿದ್ದಾರೆ.
Leave a Comment