ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಪಟ್ಟಣದ ಕಾಳಮ್ಮನಗರದ ಮನೆಯೊಂದನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಶಿರಸಿಯ ಕಾನಬಾಗಿಲು ಗ್ರಾಮದ ಹರಿಶ್ಚಂದ್ರ ನರಸಿಂಹ ಸಿದ್ಧಿ ಹಾಗೂ ಯಲ್ಲಾಪುರದ ವಡೇಹುಕ್ಕಳಿಯ ಗಂಗಾಧರ ರಾಮಕೃಷ್ಣ ಸಿದ್ಧಿ ಬಂಧಿತ ಆರೋಪಿಗಳಾಗಿದ್ದು, ಕಾಳಮ್ಮನಗರದ ನಿವಾಸಿಯಾದ ನಾರಾಯಣ ವೆಂಕಟ್ರಮಣ ಭಟ್ಟ ಅವರ ಮನೆಗೆ ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಡೆ ನುಗ್ಗಿ, ಮನೆಯಲ್ಲಿದ್ದ 5000/- ರೂ ಹಣ, ಬೆಳ್ಳಿ- ಬಂಗಾರದ ಆಭರಣಗಳು ಹಾಗೂ 1 ಕ್ವಿಂಟಲ್ ಹಸಿ ಅಡಿಕೆ, 1.5 ಕ್ವಿಂಟಲ್ ಒಣ ಅಡಿಕೆ ಸೇರಿದಂತೆ ಒಟ್ಟೂ 103500/- ರೂ ಬೆಲೆಯ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರಿಂದ ಕಳ್ಳತನ ಮಾಡಿದ ಸ್ವತ್ತುನ್ನು ಜಪ್ತುಪಡಿಸಿಕೊಳ್ಳಲಾಗಿದೆ.
ಸಿಪಿಐ ಸುರೇಶ ಯಳ್ಳೂರ ಇವರ ನೇತ್ರತ್ವದಲ್ಲಿ ಪಿ.ಎಸ್.ಐ ಮಂಜುನಾಥ ಗೌಡರ, ಪ್ರಿಯಾಂಕಾ ನ್ಯಾಮಗೌಡ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಬಸವರಾಜ ಎಮ್, ಪರಶುರಾಮ ದೊಡ್ಯನಿ, ಚನ್ನಕೇಶವ, ಪ್ರವೀಣ ಪೂಜಾರ ಇವರು ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Leave a Comment