
ಯಲ್ಲಾಪುರ : ಕಳೆದ ವರ್ಷ ವಿಜ್ರಂಭಣೆಯಿಂದ ನಡೆಯಬೇಕಿದ್ದ ಯಲ್ಲಾಪುರ ಗ್ರಾಮದೇವಿಯರ ಜಾತ್ರಾ ಮಹೋತ್ಸವವನ್ನು ಕೋವಿಡ್ ಕಾರಣದಿಂದಾಗಿ ಈ ವರ್ಷವೂ ನಡೆಸಲು ಸಾಧ್ಯವಾಗಿರುವುದರಿಂದ ಜಾತ್ರಯನ್ನು 2023 ಕ್ಕೆ ಮುಂದೂಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಕಾರ್ಮಿಕ ಖಾತೆ ಸವಿಚ ಶಿವರಾಮ ಹೆಬ್ಬಾರ್ ಅವರ ಉಪಸ್ಥಿತಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ಮುಂದೂಡಲ್ಪಟ್ಟ ಶ್ರೀ ಗ್ರಾಮದೇವಿಯ ಜಾತ್ರಾ ಮಹೋತ್ಸವವನ್ನು ಈ ವರ್ಷ ವಿಜೃಂಭಣೆಯಿಂದ ಆಚರಿಸಲು ಆಡಳಿತ ಮಂಡಳಿ ಬಹಳ ಉತ್ಸುಕವಾಗಿತ್ತು. ಜಾತ್ರೆ ನಡೆಸುವ ಕುರಿತು ದೇವಸ್ಥಾನದ ಆಡಳಿತ ಮಂಡಳಿಯು ದಿ: 28.11.2021ರಂದು ದೇವಸ್ಥಾನದ ಪುರೋಹಿತರೊಂದಿಗೆ ಸಭೆ ನಡೆಸಿ 23 ಫೆಬ್ರವರಿ 2022ರ ಅನುಕೂಲಕರ ದಿನಾಂಕವನ್ನು ನಿರ್ಣಯಿಸಲಾಗಿತ್ತು. . ಈ ಮಧ್ಯೆ ಪುನಃ ಕೊರೊನಾ ಸಾಂಕ್ರಾಮಿಕ ರೋಗ ಮತ್ತೆ ತೀವ್ರವಾಗಿ ಹರಡಲು ಪ್ರಾರಂಭವಾಗಿದ್ದರಿಂದ ಜಾತ್ರೆಯನ್ನು ಆಚರಿಸಲು ಉತ್ಸುಕರಾಗಿದ್ದ ಮಂಡಳಿಯವರು ಇನ್ನೊಮ್ಮೆ ಆಗಮಶಾಸ್ತ್ರಜ್ಞ ಜ್ಯೋತಿಷ್ಯಾಚಾರ್ಯ ವೇದಮೂರ್ತಿ ನಾಗೇಂದ್ರ ಭಟ್ಟ, ಹಿತ್ಲಳ್ಳಿಯವರೊಂದಿಗೆ ಚರ್ಚಿಸಿದಾಗ ಅವರು ಪ್ರಶ್ನೆ ಹಾಕಿ ನೋಡಿ ಸದ್ಯದ ಪರಿಸ್ಥಿತಿ ಜಾತ್ರೆಗೆ ಅನುಕೂಲಕರವಾಗಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಜಾತ್ರೆಯನ್ನು ನಡೆಸಿದರೆ, ಶೋಭಾಯಾತ್ರೆ ಮತ್ತು ಜಾತ್ರಾ ಮಂಟಪದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಅಪಾರ ಜನಜಂಗುಳಿಯಲ್ಲಿ ಅಸಾಧ್ಯದ ಸಂಗತಿ. ಆಗಮಶಾಸ್ತ್ರದ ಪ್ರಕಾರ ಒಮ್ಮೆ ಜಾತ್ರೆಯ ವಿಧಿ-ವಿಧಾನಗಳನ್ನು ಪ್ರಾರಂಭಿಸಿದ ಮೇಲೆ ಅದನ್ನು ನಿಲ್ಲಿಸುವಂತಿಲ್ಲ. ಆದರೆ ಅವರು ತಿಳಿಸಿದಂತೆ ಜಾತ್ರೆಯನ್ನು 21 ವರ್ಷಗಳ ಕಾಲ ಮುಂದೂಡಲ್ಪಟ್ಟರೂ ಯಾವುದೇ ದೋಷವಾಗುವುದಿಲ್ಲ. ಇದನ್ನು ಹೊರತುಪಡಿಸಿ ಎಲ್ಲ ರೀತಿಯ ಧಾರ್ಮಿಕ ಕ್ರಿಯೆಗಳು ಹಾಗೂ ದೇವತಾ ಕಾರ್ಯಗಳು ಎಂದಿನಂತೆ ಜರುಗಲಿವೆ ಎಂದು ದೇವಸ್ಥಾನ ದ ಧರ್ಮ ದರ್ಶಿ ತಿಳಿಸಿದ್ದಾರೆ
Leave a Comment