• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಂದಿರಾ ಕ್ಯಾಂಟೀನ್ : ಗ್ರಾಹಕರಿಗೆ ಮೆನು ವಿನಲ್ಲಿದ್ದಂತೆ ಆಹಾರವನ್ನು ನೀಡುತ್ತಿಲ್ಲ, ಪ್ರಮಾಣ ವೂ ಕಡಿಮೆ :ದೂರು

January 17, 2022 by Jayaraj Govi Leave a Comment

IMG 20220116 193731

ಯಲ್ಲಾಪುರ : ಪಟ್ಟಣದ ಬೆಲ್‌ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಗ್ರಾಹಕರಿಗೆ ಪೂರ್ಣ ಪ್ರಮಾಣದ ಆಹಾರವನ್ನು ಹಾಗೂ ಮೆನ್ಯೂನಲ್ಲಿ ನಿರ್ಧರಿಸಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.


ಇಂದಿರಾ ಕ್ಯಾಂಟೀನ್‌ಗಳಲ್ಲಿ ಸರ್ಕಾರ ನಿರ್ಧರಿಸಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸಬೇಕು ಎಂದಿದ್ದರೂ ಯಲ್ಲಾಪುರದ ಇಂದಿರಾ ಕ್ಯಾಂಟೀನ್‌ನಲ್ಲಿ ಸಾಮಾನ್ಯ ವಾಗಿ ದಿನವೂ ಪಲಾವ್ ಹಾಗೂ ಕಡಿಮೆ ತೂಕದಲ್ಲಿ ನೀಡಿ ಸಾರ್ವಜನಿಕರಿಗೆ ವಂಚಿಸುವ ಕಾರ್ಯ ವಾಗಿದೆ ಎಂದು ಅನಿಲ್‌ ಭಟ್‌, ಚಂದ್ರು ಹಾಗೂ ರಾಜು ಉಡುಪಿಕರ ಅಮೃತ ಮುಂತಾದವರು ದೂರಿದ್ದಾರೆ.

IMG 20220116 WA0194

ಈ ಕುರಿತು ಕ್ಯಾಂಟೀನ್‌ನ ವ್ಯವಸ್ಥಾಪಕ ಲೋಹಿತ್ ರನ್ನು ಪ್ರಶ್ನಿಸಿದಾಗ ನಾವು ಮೆನ್ಯೂವಿನಂತೆ ಆಹಾರವನ್ನು ಸಿದ್ದಪಡಿಸಲು ಆಗುವುದಿಲ್ಲ. ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಡುಗೆಯನ್ನು ಸಿದ್ದಪಡಿಸುತ್ತೇವೆ ಎಂದು ಉತ್ತರಿಸಿದ್ದಾರೆ.
ಇನ್ನು ನಿಗದಿ ಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಆಹಾರವನ್ನು ನೀಡಲಾಗುತ್ತಿರುವದರ ಕುರಿತು ವಿಚಾರಿಸಿದಾಗ ಗೂಗಲ್‌ನಲ್ಲಿ ನೋಡಿ, ಅಲ್ಲಿರುವಷ್ಟೇ ಆಹಾರವನ್ನು ಕೊಡುತ್ತೇವೆ ಎಂದಾಗ ಅವರ ಮುಂದಯೇ ಗ್ರಾಹಕರು ಪರಿಶೀಲಿಸಿದಾಗ ಗೂಗಲ್‌ ನಲ್ಲಿ ಪರಿಷ್ಕರಿಸಲಾದ ಪಟ್ಟಿಯು ಕಂಡುಬಂದಿದೆ. ಈ ಕುರಿತು ಪ್ರಶ್ನಿಸಿದಾಗ ನಮಗೆ ಎಷ್ಟು ಪ್ರಮಾಣವನ್ನು ನೀಡಲು ತಿಳಿಸಿಲಾಗಿದೆಯೋ ಅಷ್ಟೇ ನೀಡಲಾಗುತ್ತಿದೆ. ನಾನು ಪರಿಷ್ಕ್ರತ ಪಟ್ಟಿಯನ್ನು ನೋಡಿಲ್ಲ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಇನ್ನು ಕ್ಯಾಂಟೀನ್‌ನಲ್ಲಿ ಕಾರ್ಯ ನಿರ್ವಹಿಸುವ ಸ್ಥಳೀಯ ಕೆಲಸಗಾರರಿಗೆ ಸರಿಯಾದ ವೇತನವನ್ನು ಸಹ ನೀಡಲಾಗುತ್ತಿಲ್ಲ. ಈ ಕುರಿತು ಅವರು ಪಟ್ಟಣ ಪಂಚಾಯತ ಸಭೆಯಲ್ಲಿ ಹಲವು ಬಾರಿ ತಮ್ಮ ಅಳಲನ್ನು ಸಹ ತೋಡಿಕೊಂಡಿದ್ದಾರೆ. ಟೆಂಡರ್‌ನ್ನು ಪಡೆದಂತವರು ಕಳೆದ ವರ್ಷ ಸಪ್ಟೆಂಬರ್‌ ನಿಂದ ವೇತನವನ್ನು ನೀಡಿಲ್ಲ ಎಂದು ಕೆಲಸದವರು ತಿಳಿಸಿದ್ದಾರೆ.
ಏನೇ ಆದರು ಸರ್ಕಾರ ಶ್ರಮಿಕ ಹಾಗೂ ಬಡ ವರ್ಗದ ಜನರಿಗೆ ಸಹಾಯಕವಾಗಲೆಂದು ಕಡಿಮೆ ಬೆಲೆಯಲ್ಲಿ ಆಹಾರವನ್ನು ಒದಗಿಸಲು ಇರುವ ಸೌಲಭ್ಯ ಕ್ಕೆ ಕೊಕ್ಕೆ ಹಾಕುತ್ತಿರುವದು ಬೇಸರದ ಸಂಗತಿ. ಸರ್ಕಾರ ನಿಗದಿ ಪಡೆಸಿದ ಪ್ರಮಾಣದಲ್ಲಿ, ನಿಗದಿ ಪಡಿಸಿದ ಪಟ್ಟಿಯಂತೆ, ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಿದರೆ ಸಾಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಸಿಬೇಕಾಗಿದೆ.

Table of Contents

Toggle
  • ಈ ಕುರಿತು ಇಂದಿರಾ ಕ್ಯಾಂಟೀನ್ ಟೆಂಡರ್‌ ಪಡೆದ ಬೆಂಗಳೂರಿನ ರಂಜನ್‌ ಶೆಟ್ಟಿ,ಅವರನ್ನು ಸಂಪರ್ಕಿಸಿದಾಗ –ನಾವು ಟೆಂಡರ್‌ ಪಡೆದಾಗಿನಿಂದಲೂ ಸಹ ನಮಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ಹಣ ಬಿಡುಗಡೆಗೊಂಡಿಲ್ಲ. ಆದ್ದರಿಂದ ನಾವು ಸಹ ಸಿಕ್ಕಷ್ಟು ಹಣದಲ್ಲಿ ವೇತನ ನೀಡುತ್ತಿದ್ದೇವೆ. ರಾಜ್ಯದೆಲ್ಲೆಡೆ ಈ ರೀತಿಯ ತೊಂದರೆ ಉಂಟಾಗುತ್ತಿದೆ. ಸರ್ಕಾರದಿಂದ ನೀಡಲಾಗುವ ಮೊತ್ತದಲ್ಲೂ ಕಡಿಮೆಯಾಗಿದೆ. ಆದರೂ ನಾವು ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಕಡಿಮೆ ಪ್ರಮಾಣ ನೀಡಲಾಗುತ್ತಿರುವುದರ ಬಗ್ಗೆ ನನಗೆ ತಿಳಿದು ಬಂದಿರಲಿಲ್ಲ. ತಕ್ಷಣ ನಿರ್ವಾಹಕರಿಗೆ ಕರೆ ಮಾಡಿ ಈ ಕುರಿತು ಕ್ರಮ ಕೈಗೊಳ್ಳತ್ತೇನೆ ಎಂದಿದ್ದಾರೆ.
    • Share this:
    • Related News:

ಈ ಕುರಿತು ಇಂದಿರಾ ಕ್ಯಾಂಟೀನ್ ಟೆಂಡರ್‌ ಪಡೆದ ಬೆಂಗಳೂರಿನ ರಂಜನ್‌ ಶೆಟ್ಟಿ,ಅವರನ್ನು ಸಂಪರ್ಕಿಸಿದಾಗ –ನಾವು ಟೆಂಡರ್‌ ಪಡೆದಾಗಿನಿಂದಲೂ ಸಹ ನಮಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ಹಣ ಬಿಡುಗಡೆಗೊಂಡಿಲ್ಲ. ಆದ್ದರಿಂದ ನಾವು ಸಹ ಸಿಕ್ಕಷ್ಟು ಹಣದಲ್ಲಿ ವೇತನ ನೀಡುತ್ತಿದ್ದೇವೆ. ರಾಜ್ಯದೆಲ್ಲೆಡೆ ಈ ರೀತಿಯ ತೊಂದರೆ ಉಂಟಾಗುತ್ತಿದೆ. ಸರ್ಕಾರದಿಂದ ನೀಡಲಾಗುವ ಮೊತ್ತದಲ್ಲೂ ಕಡಿಮೆಯಾಗಿದೆ. ಆದರೂ ನಾವು ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಕಡಿಮೆ ಪ್ರಮಾಣ ನೀಡಲಾಗುತ್ತಿರುವುದರ ಬಗ್ಗೆ ನನಗೆ ತಿಳಿದು ಬಂದಿರಲಿಲ್ಲ. ತಕ್ಷಣ ನಿರ್ವಾಹಕರಿಗೆ ಕರೆ ಮಾಡಿ ಈ ಕುರಿತು ಕ್ರಮ ಕೈಗೊಳ್ಳತ್ತೇನೆ ಎಂದಿದ್ದಾರೆ.

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,066 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...