
ಯಲ್ಲಾಪುರ : ವ್ಯಾಪಾರ ಮಾಡುವುದಾಗಿ ನಂಬಿಸಿ ಬೈಕ್ ಕಳ್ಳತನ ಮಾಡಿದ ಆರೋಪಿತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಜೋಯಿಡಾ ತಾಲೂಕಿನ ಪ್ರಧಾನಿ ಯ ಹಸನಸಾಬ ರಾಜೇಸಾಬ ಅಮೀನಗಡ (36) ಬಂಧಿತ ಆರೋಪಿಯಾಗಿದ್ದು, ಈತನು ಕಣ್ಣಿಗೇರಿಯ ಕೋಳಿ ಮಾಂಸದ ಅಂಗಡಿಗೆ ಬಂದು ಖರೀದಿಸುವ ನೆಪದಲ್ಲಿ ಮಾಲೀಕ ಹುಣಶೆಟ್ಟಿಕೊಪ್ಪದ ಶಂಕರ ವಾಸುದೇವ ಗೋಂದಳಿ ಎನ್ನುವವರನ್ನು ನಂಬಿಸಿ, ಮಾಂಸವನ್ನು ಸಿದ್ದ ಪಡಿಸಿ ನಾನು ತಾಟವಾಳಕ್ಕೆ ಹೋಗಿ ಬರುತ್ತೇನೆ ಎಂದು ಪ್ಯಾಷನ್ ಪ್ರೋ ಬೈಕ್ನ್ನು ತೆಗೆದುಕೊಂಡು ಹೋಗಿದ್ದು ಬೈಕಂನ್ನು ಮರಳಿಸದೇ ಇದ್ದರಿಂದ ಬಗ್ಗೆ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿಸಿರುತ್ತಾರೆ. ಸಿಪಿಐ ಸುರೇಶ ಯಳ್ಳೂರ ಇವರ ನೇತ್ರತ್ವದಲ್ಲಿ ಪಿ.ಎಸ್.ಐ ಮಂಜುನಾಥ ಗೌಡರ, ಪ್ರಿಯಾಂಕಾ ನ್ಯಾಮಗೌಡ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಮಾಣೇಶ್ವರ ನಾಯಕ, ಪರಶುರಾಮ ಕಾಳೆ, ಶೇಷು ಮರಾಠಿ, ವಿನಾಯಕ ರೆಡ್ಡಿ ಹಾಗೂ ಶೋಭಾ ನಾಯ್ಕ ಇವರು ಆರೋಪಿತನನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Leave a Comment