
ಯಲ್ಲಾಪುರ :ಪಟ್ಟಣದ ಬೆಲ್ ರಸ್ತೆ ಬದಿಯಲ್ಲಿರುವ ಅನಧಿಕೃತ ತರಕಾರಿ ಅಂಗಡಿಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದು, ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು.ಪಪಂ ಆರೋಗ್ಯಾಧಿಕಾರಿ ಗುರು ನೇತೃತ್ವದಲ್ಲಿ ಸಿಬ್ಬಂದಿ ಅಂಗಡಿ ತೆರವಿಗೆ ಬಂದ ವೇಳೆ ತರಕಾರಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್ನಿಂದ ಗಾಂಧಿ ಚೌಕದವರೆಗೆ ಫುಟ್ ಪಾತ್ ಮೇಲೆಯೇ ತರಕಾರಿ, ಹಣ್ಣು-ಹೂವು ವ್ಯಾಪಾರ ನಡೆಯುತ್ತದೆ. ಅದರಿಂದ ಫುಟ್ಪಾತ್ ಮೇಲೆ ಓಡಾಡುವವರು ರಸ್ತೆ ಮೇಲೆ ಓಡಾಡುವಂತಾಗಿದೆ.

ಅದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ. ಕೇವಲ ನಮ್ಮ ಅಂಗಡಿಗಳನ್ನು ಏಕೆ ತೆರವು ಮಾಡುತ್ತಿದ್ದೀರಿ ಎಂದು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ ಕೊರವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ತರಕಾರಿ, ಹಣ್ಣು ಮಾರಾಟ ಅಧಿಕೃತವಾಗಿ ಮಾರುಕಟ್ಟೆಯಲ್ಲೇ ನಡೆಯುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು, ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದರು.
Leave a Comment