ಯಲ್ಲಾಪುರ: ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ, ಮನುಷ್ಯನ ಆಹಾರಕ್ಕೆ, ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಹಳಷ್ಟು ಮಾರಕ ಪರಿಣಾಮ ಬೀರುತ್ತಿದೆ. ಅಂತೆಯೇ ನಾವು ರಸ್ತೆ ಬದಿ ಕುಡಿಯುವ ಎಳನೀರು, ತಂಪು ಪಾನೀಯ ಎಲದಕ್ಕೂ ಪ್ಲಾಸ್ಟಿಕ್ ಸ್ಟ್ರಾ ಉಪಯೋಗಿಸುತ್ತೇವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಎಂದು ಮಂಚಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್ಟ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ಎಳನೀರು ಮಾರಾಟ ಮಾಡುವವರಲ್ಲಿ ತೆರಳಿ ಪ್ಲಾಸ್ಟಿಕ್ ಸ್ಟ್ರಾ ದಿಂದ ಆಗುವ ಸಮಸ್ಯೆ ಬಗ್ಗೆ ವಿವರಿಸಿ ಪೇಪರ್ ಸ್ಟ್ರಾ ವಿತರಿಸಿ,ಬಳಕೆ ಮಾಡುವಂತೆ ವಿನಂತಿಸಿದರು. ನಂತರ ಮಾತನಾಡಿದ ಅವರು ಎಳನೀರು ಕುಡಿದು ಸ್ಟ್ರಾ ಅದನ್ನು ರಸ್ತೆಯಲ್ಲೇ ಬಿಸಾಕಿ ಹೋಗುತ್ತೇವೆ. ಅದು ಮಳೆಗಾಲದಲ್ಲಿ ಹಳ್ಳಕ್ಕೋ, ನದಿಗೋ ಇಲ್ಲ ಮಣ್ಣಿಗೆ ಸೇರುತ್ತದೆ .ಇದು ನಮಗೆ ತಿಳಿಯದೆ ನಮ್ಮ ಆಹಾರ, ಕುಡಿಯುವ ನೀರು ಹೀಗೆ ನಮ್ಮ ಶರೀರ ಸೇರುತ್ತಿದೆ ಜೊತೆಯಲ್ಲಿ ಕ್ಯಾನ್ಸರ್ ಅಂತ ರೋಗಗಳೂ ನಮ್ಮನ್ನು ಹೊಕ್ಕುತ್ತಿದೆ. ಆದ್ದರಿಂದ ನಾವು ಪ್ಲಾಸ್ಟಿಕ್ ಬದಲು ಪೇಪರ್ ಸ್ಟ್ರಾ ಉಪಯೋಗಿಸುವ ಪದ್ದತಿಯನ್ನು ರೂಢಿಸಿಕೊಂಡರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು. ಸಣ್ಣ ಪ್ರಮಾಣವೇ ಸರಿ ಆದರೆ ಸಲ್ಪ ಮಟ್ಟಿಗಾದರೂ ಪ್ಲಾಸ್ಟಿಕ್ ನಮ್ಮ ಮಣ್ಣು ನಮ್ಮ ದೇಹ ಸೇರುವುದನ್ನು ನಿಲ್ಲಿಸಬಹುದು ಎಂದು ತಿಳಿ ಹೇಳಿದರು.
ಪಟ್ಟಣ ಪಂಚಾಯತದ ಆರೋಗ್ಯ ಅಧಿಕಾರಿ, ಗುರು ಗಡಗಿ, ಸಂಜಯ, ಯಲ್ಲಾಪುರ ಉಪ ವಲಯ ಅರಣ್ಯಾಧಿಕಾರಿ, ಯಲ್ಲಪ್ಪ ಇದ್ದರು.
ಸಾರ್ವಜನಿಕರುÀ ಸಹ ತಂಪು ಪಾನೀಯಗಳನ್ನು ಕುಡಿಯುವಾಗ, ಖರೀದಿಸುವಾಗ ಪೇಪರ್ ಸ್ಟ್ರಾ ಕೊಡುವಂತೆ ಅಂಗಡಿಕಾರರಲ್ಲಿ ಕೇಳಿ ಪಡೆದು ಪೇಪರ್ ಸ್ಟ್ರಾ ಉಪಯೋಗಿಸಿ ಪರಿಸರ ಹಾಗು ನಮ್ಮ ಅರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
Leave a Comment