
ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆದ “ರಂಗೋಲಿಯಲ್ಲಿ ಭಾರತ ನಕ್ಷೆ ಬಿಡಿಸುವ ಸ್ಪರ್ಧೆ” ಗಮನ ಸೆಳೆಯಿತು.
. ರಂಗೋಲಿ ಪುಡಿಯ ಜೊತೆ ಅಕ್ಕಿ, ಗೋದಿ ಮೊದಲಾದ ಧಾನ್ಯಗಳನ್ನು ಬಳಸಿ ಮಕ್ಕಳು ಚಿತ್ರ ಬಿಡಿದರು. ನಂತರ ಸೂಚಿಸಲಾದ ಸ್ಥಳಗಳನ್ನು ಗುರುತು ಮಾಡಿದರು. ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಹೆಗಡೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ೧೦ನೇ ತರಗತಿ ಪರೀಕ್ಷೆಗೆ ಪೂರಕವಾದ ಸ್ಪರ್ಧೆ ಇದಾಗಿದೆ. ಈ ಸ್ಪರ್ಧೆಯಲ್ಲಿ ಲಕ್ಷಿö್ಮÃ ಕೃಷ್ಣ ಪಟಗಾರ ಪ್ರಥಮ, ಸಮೀಕ್ಷಾ ಸುರೇಶ ಮಹಾಲೆ ದ್ವಿತೀಯ, ಮೇಘಾ ವಿಶ್ವನಾಥ ಪಟಗಾರ ಹಾಗೂ ಪಲ್ಲವಿ ಗೋಪಾಲ ಭಟ್ಟ ತೃತೀಯ ಬಹುಮಾನ ಪಡೆದರು.
Leave a Comment