ಹೊನ್ನಾವರ : ತನಗೆ ಅವಾಚ್ಯವಾಗಿ ನಿಂದಿಸಿ, ಮಾನಕ್ಕೆ ಕುಂದುAಟು ಮಾಡಿ ಧರಿಸಿದ್ದ ಬೆಲೆಬಾಳುವ ಆಭರಣ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೋರ್ವರು ಐವರ ವಿದುದ್ಧ ದೂರು ನೀಡಿದ್ದಾಳೆ.
ತಾಲೂಕಿನ ಚಂದಾವರದ ನೂರಾನಿ ಮೊಹಲ್ಲಾದ ನಿವಾಸಿಗಳಾದ ಅಸಫ್ ಅಬ್ದುಲ್ ಗಫಾರ್ ಗನಿ, ನಬಿಲ್ ಅಸಫ್ ಅಲಿ ಘನಿ, ಅಶ್ರಫ್ ಅಲಿ ಅಬ್ದುಲ್ ಗಫಾರ್ ಘನಿ, ಅದಮ್ ಸಾಬ್, ಮೀರಾಸಾಬ್ ಶೇಖ್, ಫಾರೂಕ್ ಮೀರಾಸಾಬ್ ಶೇಖ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರೆಲ್ಲರೂ ಸೇರಿ ಬುಧವಾರ ಚಂದಾವರ ಗ್ರಾಮ ಪಂಚಾಯತ್ ಎದುರಿಗೆ ಜೋನಿಟಾ ಫರ್ನಾಂಡೀಸ್, ಅವರ ಪತಿ ಶಾ ಮುಬಾರಕ್ ಇಬ್ಬರೂ ನಿಂತುಕೊAಡಿದ್ದಾಗ ಚೆಕ್ ಬೌನ್ಸ್ ವಿಷಯದಲ್ಲಿ ಶಾ ಮುಬಾರಕ್ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಶಾ ಮುಬಾರಕ್ ಅವರ ಮೆಲೆ ಹಲ್ಲೆಗೆ ಮುಂದಾದಾಗ ತಪ್ಪಿಸಲು ಹೋದ ಪತ್ನಿ ಜೋನಿಟಾ ಫರ್ನಾಂಡೀಸ್ಗೂ ಆರೋಪಿತರು ಅವ್ಯಾಚ ಶಬ್ಧಗಲಿಂದ ನಿಂದಿಸಿ, ಆಕೆ ಧರಿಸಿದ್ದ ಚೂಡಿದಾರ್ ಟಾಪ್ ಅನ್ನು ಹಿಡಿದು ಎಳೆದಾಡಿ ಮಾನಕ್ಕೆ ಕುಂದುAಟುಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಅಲ್ಲದೇ ಅರೋಪಿ ಆಸಫ್ ಘನಿ ಜೋನಿಟಾ ಕುತ್ತಿಗೆಯಲ್ಲಿ ಧರಿಸಿದ್ದ 25 ಗ್ರಾಂ ತೂಕದ ಅಂದಾಜು 80 ಸಾವಿರ ರೂಪಾಯಿ ಬೆಲೆಯ ಬಂಗಾರದ ಚೈನ್ ಅನ್ನು ಕಿತ್ತುಕೊಂಡು, ಜೀವ ಬೆದರಿಕೆ ಹಾಕಿ ಹೋಗಿದ್ದಾನೆಂದು ಆರೋಪಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment