
ಯಲ್ಲಾಪುರ : ಇಂದಿನ ಯುವಕರು ಮೊಬೈಲ್ ಗೀಳಿನಿಂದ ಹೊರಬಂದು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಕ್ರೀಡೆಯು ನಮ್ಮ ಮಾನಸಿಕ ಸೈರ್ಯವನ್ನು ಹೆಚ್ಚಿಸುತ್ತದೆ ಯಲ್ಲಾಪುರ ಅನೇಕ ಸಾಧಕರನ್ನು ರಾಜ್ಯಕ್ಕೆ ನೀಡಿದೆ ಇಂತಹ ಕ್ರೀಡಾಕೂಟವು ಸ್ಥಳೀಯ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡಬೇಕಾಗಿದೆ ಎಂದು ಯುವ ಮುಖಂಡ ವಿವೇಕ ಹೆಬ್ಬಾರ್ ಹೇಳಿದರು.

ಅವರು ಬುಧವಾರ ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಯುವ ಮೋರ್ಚಾ ಹಾಗೂ ಗ್ರಾಮದೇವಿ ಸ್ಪೋರ್ಟ್ಸ್ ಕ್ಲಬ್ ಕಿರವತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಮಲ ಟ್ರೋಫಿಯ ಸಮಿಪೈನಲ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿ ಯುವ ಮೋರ್ಚಾ ತಂಡವು ಅತ್ಯಂತ ಯಶಸ್ವಿಯಾಗಿ ಕಮಲ ಟ್ರೋಫಿ ಯನ್ನು ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಯುವ ಮೋರ್ಚಾದ ಅಡಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಮುನ್ನಡೆಸಲಾಗುವುದು.ಕ್ರೀಡೆಯಲ್ಲಿ ಆಸಕ್ತಿ ಇರುವ ಸ್ಥಳೀಯ ಯುವಕರ ತಂಡವನ್ನು ರಚಿಸಿಕೊಂಡು ಯಲ್ಲಾಪುರ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ. ರವಿ ಭಟ್ ಬರಗದ್ದೆ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ್, ಮಾಧ್ಯಮ ಪ್ರಮುಖ ಸುನೀಲ್ ಕಾಂಬ್ಳೆ, ಎಮ್.ಎನ್.ಭಟ್. ಗಣೇಶ ಹೆಗಡೆ, ನರಸಿಂಹ ಕಿರಗಾರೆ, ಸುಜಯ ಮರಾಠಿ ಹಾಗೂ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು
Leave a Comment