
ಯಲ್ಲಾಪುರ : ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಅಂಕೋಲಾ ತಾಲೂಕಿನ ಹಳವಳ್ಳಿ ಬಾಳೆಗದ್ದೆಯ ಭಾಸ್ಕರ ನಾರಾಯಣ ಸಿದ್ದಿ (25) ಬಂಧಿತ ಆರೋಪಿಯಾಗಿದ್ದು, ಈತನು ಕಳೆದ ವರ್ಷ ಉಪಳೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯ ಮಳಲಗಾಂವ ಅಂಗನವಾಡಿ ಕೇಂದ್ರದ ಬೀಗದ ಕೊಂಡಿಯನ್ನು ಮುರಿದು ಕೋಣೆಯಲ್ಲಿದ್ದ ಸುಮಾರು 13,500/- ರೂ ಬೆಲೆಯ ಆಹಾರ ಸಾಮಗ್ರಿ ಹಾಗೂ ಅಡಿಗೆ ಪಾತ್ರೆಯನ್ನು ಕಳ್ಳತನ ಮಾಡಿರುವ ಬಗ್ಗೆ ಹಾಗೂ ಹಿತ್ತಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು, ದೇವಸ್ಥಾನದಲ್ಲಿದ್ದ ಹಿತ್ತಾಳೆಯ ಗಂಟೆ ಹಾಗೂ ಕಾಣಿಕೆ ಡಬ್ಬದಲ್ಲಿದ್ದ ಸುಮಾರು 1250=00 ರೂಪಾಯಿ ಹೀಗೆ ಒಟ್ಟು 16,750/-ರೂ ಬೆಲೆಯ ಸ್ವತ್ತುನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇವೆರಡೂ ಪ್ರಕರಣಗಳ ಬೆನ್ನತ್ತಿದ್ದ ಪೊಲೀಸರು, ತನಿಖೆಯಿಂದ ಖಚಿತ ಮಾಹಿತಿಯ ಮೇಲೆ ಆರೋಪಿಯನ್ನು ಬಂಧಿಸವಲ್ಲಿ ಯಶಸ್ವಿಯಾಗಿರುತ್ತಾರೆ.
ಸಿ.ಪಿ.ಐ. ಸುರೇಶ ಯಳ್ಳೂರ ಇವರ ನೇತ್ರತ್ವದಲ್ಲಿ ಪಿ.ಎಸ್.ಐ ಮಂಜುನಾಥ ಗೌಡರ ಹಾಗೂ ಪ್ರಿಯಾಂಕಾ ನ್ಯಾಮಗೌಡ ಹಾಗೂ ಸಿಬ್ಬಂದಿಯವರಾದ ಬಸವರಾಜ ಹಗರಿ, ಮಹ್ಮದ ಶಫೀ, ಗಜಾನನ ನಾಯ್ಕ, ಮ.ಪಿ.ಸಿ ಶೋಭಾ ನಾಯ್ಕ ಇವರು ಆರೋಪಿತನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Leave a Comment