
ಯಲ್ಲಾಪುರ : ‘ಬೆಳಕಿನಡೆಗೆ ದಾರಿ ತೋರುವ ಎಲ್ಲವೂ ನಮ್ಮ ಜೀವನದ ಆಧಾರವಾಗಿದೆ.ಅದೇ ನಮ್ಮ ಬದುಕಿನ ಪ್ರತ್ಯಕ್ಷ ದೇವರಾಗಿ, ಜ್ಞಾನದ ಸ್ವರೂಪ, ಚೈತನ್ಯದ ಪ್ರತಿರೂಪವಾಗಿದೆ.ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಎಂ.ಎನ್.ಭಟ್ಟ ಹಳವಳ್ಳಿ ಹೇಳಿದರು.
ಪಟ್ಟಣದ ವೈ.ಟಿ.ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಪಾರಂಪರಿಕ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ, ದತ್ತಿ ನಿಧಿ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜೀವನುದ್ದಕ್ಕೂ ಕಲಿಯುವ, ಕಲಿಸುವ ಲವಲವಿಕೆ ಇದ್ದಾಗ ಮಾತ್ರ ಚೈತನ್ಯತೆಯಿಂದ ಬದುಕಲು ಸಾಧ್ಯವಿದೆ’ ಎಂದ ಅವರು ಜ್ಞಾನವನ್ನು ನೀಡುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದರು.
ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ ಮಾತನಾಡಿ, ‘ಬಂದAತಹ ಅವಕಾಶಗಳನ್ನು ಬಳಸಿಕೊಳ್ಳಬೇಕೆ ಹೊರತು ಅವಕಾಶಕ್ಕಾಗಿ ಕಾಯುತ್ತಾ ಕೂರುವುದಲ್ಲ.ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಕಲಿಯುವುದು ಅತ್ಯಗತ್ಯವಾಗಿದೆ. ಹೀಗಾಗಿ ೩೫ ವರ್ಷಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಇದು ಕೌಶಲ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ತೆಯ ನಿರ್ದೇಶಕ ನಾಗರಾಜ ಮದ್ಗುಣಿ ಮಾತನಾಡಿ, ‘ ನಿಮ್ಮ ಬದುಕನ್ನು ರೂಪಿಸಿಕೊಳ್ಳಲು ಒತ್ತಾಯದ ವಿಷಯಕ್ಕೆ ಒತ್ತು ನಿಡದೇ, ನಿಮ್ಮ ಆಸಕ್ತ ವಿಷಯದ ಶಿಕ್ಷಣವನ್ನು ಆಯ್ದುಕೊಳ್ಳಿ, ಪುಸ್ತಕದ ಶಿಕ್ಷಣದ ಜೊತೆಗೆ ಬದುಕನ್ನು ರೂಪಿಸುವ ಶಿಕ್ಷಣಕ್ಕೂ ಆಧ್ಯತೆ ನೀಡಿ ಎಂದರು.
ಅನನ್ಯ ಭಟ್ಟ ಪ್ರಾರ್ಥನೆ ಹಾಡಿದರು, ಕಾಲೇಜಿನ ಉಪನ್ಯಾಸಕ ಸಚಿನ್ ನಾಯ್ಕ ಸ್ವಾಗತಿಸಿದರು, ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು,ಉಪನ್ಯಾಸಕರಾದ ಅಶ್ವಿನಿ ಕೆ., ಮನೋಹರ ಶಾನಭಾಗ, ಆನಂದ ಹೆಗಡೆ ನಿರೂಪಿಸಿದರು, ರೇಷ್ಮಾ ಶೇಖ ವಂದಿಸಿದರು.
Leave a Comment