ಯಲ್ಲಾಪುರ : ರಸ್ತೆ ಬದಿ ಕಸ ಎಸೆಯುತ್ತಿರುವ ದುರುಳರು ಹೆಚ್ಚಾಗಿದ್ರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವಂತೆ ಸಾರ್ವಜನಿಕರು ಅಗ್ರಹ್ ಸಿದ್ದಾರೆ. ಅಲ್ಲಲ್ಲಿ ಕಸದ ರಾಶಿಯಿಂದ ಪಟ್ಟಣದ ಸೌಂದರ್ಯವನ್ನಷ್ಟೇ ಹಾಳುಮಾಡುತ್ತಿರುವುದಲ್ಲದೆ, ರೋಗ ಹಾಗೂ ರುಜಿನ ಹರಡುವಂತಾಗಿ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಚಿಕ್ಕವಾದರೂ ಚೊಕ್ಕ ಪಟ್ಟಣವೆಂಬ ಬಿರುದನ್ನು ಪಡೆಯಬಹುದಾದ ಎಲ್ಲ ಗುಣಲಕ್ಷಣಗಳನ್ನು ಯಲ್ಲಾಪುರ ಹೊಂದಿದೆಯಾದರೂ, ಯಲ್ಲಾಪುರದ ಸ್ವಚ್ಛತೆಯಲ್ಲಿ ಎಡವಿದಂತೆ ಕಾಣುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ. ಪಂಚಾಯಿತಿಯಿಂದ ಪ್ರತಿನಿತ್ಯ ಕಸ ಒಯ್ಯುವ ವಾಹನಗಳು ಮನೆ ಮನೆಗೆ ತೆರಳುತ್ತಿದ್ದರೂ ಸಹ, ಸಾರ್ವಜನಿಕರು ಅದಕ್ಕೆ ಸರಿಯಾಗಿ ಹೊಂದಿಕೊಳ್ಳದಿರುವುದು ಅಥವಾ ಕೆಲವೊಮ್ಮೆ ವಾಹನಗಳು ಬಂರುವ ಸಮಯಕ್ಕೆ ಮನೆಯಲ್ಲಿಯ ಜನ ಹೊರಹೋಗಿರುವುದು ತೊಂದರೆಯಾಗಿ ಪರಿಣಮಿಸಿದೆ. ಇದರಿಂದ ಜನ ರಸ್ತೆ ಕೂಡುವ ಜಾಗಗಳಲ್ಲಿ, ಚರಂಡಿಗಳ ಪಕ್ಕದಲ್ಲಿ, ಪಟ್ಟಣದ ಹೊರಭಾಗಗಳಲ್ಲಿ ಬೇಕಾಬಿಟ್ಟಿ ಕಸವನ್ನು ಎಸೆಯುತ್ತಿದ್ದು, ಇದಕ್ಕೆ ಪಟ್ಟಣದಲ್ಲೆಲ್ಲಿಯೂ ಕಸದ ತೊಟ್ಟಿಗಳನ್ನು ಅಳವಡಿಸದಿರುವುದೇ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಲ ವರ್ಷಗಳ ಹಿಂದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ದೊಡ್ಡ ದೊಡ್ಡ ಕಸದ ತೊಟ್ಟಿಗಳನ್ನು ಇಡುತ್ತಿದ್ದರು. ಜನತೆ ತಮಗನುಕೂಲವಾದಾಗ ಅದರಲ್ಲಿ ಕಸವನ್ನೆಸೆದು ತೆರಳುತ್ತಿದ್ದರು. . ಅದರ ಬದಲಾಗಿ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿಯೇ ಕಸ ವಿಂಗಡಿಸಿ ನೀಡುವಂತೆ ಪಟ್ಟಣ ಪಂಚಾಯತದಿಂದ ಸಾರ್ವಜನಿಕರಿಗೆ ತಿಳಿಸಲಾಯಿತು. ಆದರೆ ಇದಕ್ಕೆ ಹೊಂದಿಕೊಳ್ಳದ ಕೆಲ ಜನರು ಈಗಲೂ ಸಹ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ.

Leave a Comment