ಭಟ್ಕಳ: ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂದಿನ ಆದೇಶದವರೆಗೆ ಜಿಲ್ಲೆಯ ಭಟ್ಕಳ ಪುರಸಭೆಗೆ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡುವಂತೆ ಸರಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ ಎಲ್. ಪ್ರಸಾದ ಆದೇಶ ಹೊರಡಿದ್ದಾರೆ.
ಪುರಸಭೆ ನಾಮನಿರ್ದೇಶನ ಮಾಡಿದ ಸದಸ್ಯರು ಶ್ರೀಕಾಂತ ನಾರಾಯಣ ನಾಯ್ಕ, ಸತೀಶ ತಿಮ್ಮಯ್ಯ ನಾಯ್ಕ, ಉದಯ ಗೋವಿಂದ ನಾಯ್ಕ, ಶ್ರೀಪಾದ ನಾರಾಯಣ ಕಂಚುಗಾರ,
ಶ್ರೀಮತಿ ರಜನಿಬಾಯಿ ಮಂಜುನಾಥ ಪ್ರಭು ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಪುರಸಭೆ ಭಟ್ಕಳ ಮುಖ್ಯಾಧಿಕಾರಿಗಳಿಗೆ ಹಾಗೂ ಪುರಸಭೆ ಸದಸ್ಯರುಗಳಿಗೆ ಆದೇಶ ಪ್ರತಿ ಕಳುಹಿಸಲಾಗಿದೆ.





Leave a Comment