ಯಲ್ಲಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಮಾಸಿಕ ಕೆಡಿಪಿ ಸಭೆಯು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ ಜನರಿಗೆ ಎಷ್ಟೇ ತಿಳಿ ಹೇಳಿದರೂ ಜ್ವರ ,ನೆಗಡಿ ಕೆಮ್ಮು ರೋಗ ಬಂದರೆ ತಮ್ಮ ಮನೆಗಳಲ್ಲಿಯೇ ಸ್ವಯಂ-ಚಿಕಿತ್ಸೆ ತೆಗೆದುಕೊಂಡು ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರುವದರಿಂದ ಪ್ರಣಾಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಜನರು ಮೊದಲ ಡೋಸ್ ಲಸಿಕೆ ಪಡೆದವರು ೨ ನೇ ಡೋಸ್ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ತೆಗೆದುಕೊಳ್ಳಲು ತಿಳಿಸಿದರೆ ನಮ್ಮ ಮೇಲೆಯೇ ಹರಿಹಾಯುತ್ತಾರೆ. ಲಸಿಕೆ ತೆಗೆದುಕೊಳ್ಳದಿರುವದು , ಕೋವಿಡ್ ಲಕ್ಷಣ ವಿದ್ದರೂ ನಿರ್ಲಕ್ಷö್ಯ ತಾಳುವದು ಇದು ಸರಿಯಲ್ಲ . ಇದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರuವಾಗುತ್ತದೆ ಎಂದರು.
ತೋಟಗಾರಿಕಾ ಸಹಾಯಕ ನಿರ್ಧೇಶಕ ಸತೀಶ ಹೆಗಡೆ ಮಾತನಾಡಿ, ರೈತರು ಕೇವಲ ಅಡಿಕೆ ತೋಟದ ವಿಸ್ತರಣೆಗೆ ಮುಂದಾಗದೇ ಸಾಂಬಾರು ಬೆಳೆಗಳ ಕುರಿತು ರೈತರು ಆಸಕ್ತಿ ತೋರಬೇಕಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ವಿ.ಎಂ.ಭಟ್ಟ ಮಾತನಾಡಿ, ತಾಲೂಕಿನ ವಿವಿಧೆಡೆಗಳಲ್ಲಿ ಅತ್ಯಗತ್ಯವಾಗಿದ್ದ ೯೧ ಕಾಲುಸಂಕ ನಿರ್ಮಾಣಕ್ಕೆ ೧೧ ಕೋಟಿ ರೂ ಮಂಜೂರಿ ದೊರೆತಿದೆ. ಪ್ರಕೃತಿ ವಿಕೋಪ ಯೋಜನೆಯಡಿ ಸೇತುವೆಗಳ ನಿರ್ಮಾಣಕ್ಕೆ ೪೨೦ ಲಕ್ಷ ರೂ.: ನಬಾರ್ಡ್ ಯೋಜನೆಯಡಿ ಖಾನಾಪುರ-ತಾಳಗುಪ್ಪಾ ಹೆದ್ದಾರಿ ದುರಸ್ತಿಗೆ ೮೨.೫೦ ಹಾಗೂ ತಾಟವಾಳ ಸೇತುವೆ ನಿರ್ಮಾಣಕ್ಕೆ ೭೨೧ ಲಕ್ಷ ರೂ. ಹೀಗೆ ವಿವಿಧ ರಸ್ತೆ ಕಾಮಗಾರಿಗಳಿಗೆ ಮಂಜೂರಾಗಿದೆ. ಎಂದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸುಬ್ರಾಯ ಭಟ್ಟ ಬೇಸಿಗೆಯಲ್ಲಿ ಮೇವಿನ ಕೊರತೆ ನೀಗುವ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಫಿಕಾ ಹಳ್ಳೂರ, ಶಿಕ್ಷಣ ಇಲಾಖೆಯ ಎನ್.ಆರ್.ಹೆಗಡೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ವರದಿ ನೀಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಉಪಸ್ಥಿತರಿದ್ದರು.
Leave a Comment