ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಐಪಿಎಲ್ ಮಾದರಿಯಲ್ಲಿ ವೈಪಿಎಲ್ ಲೀಗ ಕ್ರಿಕೆಟ್ ಪಂದ್ಯಾವಳಿ, ಹಮ್ಮಿಕೊಂಡು ತಾಲೂಕಿನ ಪ್ರತಿಭಾವಂತ ಆಟಗಾರರಿಗೆ ಅವರ ಆಟವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ ಹೇಳಿದರು.
ಅವರು ನಿಸರ್ಗ ಮನೆ ರೆಸಾರ್ಟ್ ನಲ್ಲಿ ವೈಪಿಎಲ್ ಪಂದ್ಯಾವಳಿಯ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಐಪಿಎಲ್ ಮಾದರಿಯ ಕ್ರಿಕೆಟ್ ಆಯೋಜಿಸುವ ಮೂಲಕ ಎಲೆ ಮರೆಯ ಕಾಯಾಗಿರುವ ನೂರಾರು ಆಟಗಾರರಿಗೆ ವೇದಿಕೆ ಒದಗಿಸಲಾಗುತ್ತದೆ. ತನ್ಮೂಲಕ ಡಿಜಿಟಲ್ ಆಟದಲ್ಲಿ ತಲ್ಲೀನರಾಗಿರುವ ಮಕ್ಕಳು ಹಾಗೂ ಯುವಕರನ್ನು ಮರಳಿ ಮೈದಾನಕ್ಕೆ ಕರೆ ತರುವ ಪ್ರಯತ್ನ ಮಾಡುತ್ತಿದ್ದೆವೆ. ಯಲ್ಲಾಪುರ ಪ್ರಿಮಿಯರ್ ಲೀಗ್(ವೈಪಿಎಲ್) ಪಂದ್ಯಾವಳಿ ಫೆ ೧೨ ರಿಂದ ಪ್ರಾರಂಭವಾಗಲಿದ್ದು, ಒಟ್ಟು ೮ ತಂಡ ಭಾಗವಹಿಸಲಿವೆ. ಈ ೮ ತಂಡದ ಮಾಲಕರು, ಒಂದು ತಂಡದಲ್ಲಿ ೧೫ ಆಟಗಾರರನ್ನು ಕಡ್ಡಾಯವಾಗಿ ಖರೀದಿ ಮಾಡಬೇಕು. ಪ್ರತಿ ತಂಡಕ್ಕೆ ಮೂರು ಜನ ಐಕಾನ್ ಆಟಗಾರರು ಇರಲಿದ್ದು ಈಗಾಗಲೆ ಅವರ ಹರಾಜು ಆಗಿದೆ,ಇಂದು ಇತರೆ ಆಟಗಾರರು ಹರಾಜು ಪ್ರಕ್ರಿಯೆ ನಡೆಯಲಿದೆ. ೧೭೫ ಜನರಲ್ಲಿ ಬಿಡ್ ಮಾಡಲಾಗುವುದು, ಅವರಲ್ಲಿ ೧೨೦ ಆಟಗಾರರನ್ನು ಆಯ್ಕೆಮಾಡಿ ಉಳಿದವರನ್ನು ರಿಜರ್ವ ಆಗಿ ಇಡಲಾಗುವದು , ವೈಪಿಎಲ್ ಪಂದ್ಯಾವಳಿಯ ಮೂಲಕ ಉತ್ತಮ ತಾಲೂಕು ತಂಡ ಕಟ್ಟುವ ಉದ್ದೇಶ ಹೊಂದಲಾಗಿದೆ ಎಂದರಲ್ಲದೇ
ಫೆ ೧೨ ರಿಂದ ಮುಂದಿನ ೨೦ ದಿನಗಳವರೆಗೆ ಪ್ರತಿ ದಿನ ಪಂದ್ಯ ನಡೆಯಲಿದೆ. ಪ್ರಥಮ ಬಹುಮಾನ ಮೊತ್ತ ೨೦ ಸಾವಿರ ರೂ, ದ್ವಿತೀಯ ಬಹುಮಾನ ೧೫ ಸಾವಿರ ರೂ ಹಾಗೂ ಇತರೆ ಬಹುಮಾನಗಳಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾದ ರಣಜಿತ ಪಿಳ್ಳೆ, ಜಿಕ್ರಿಯಾ ವಜ್ರಳ್ಳಿ, ಮಾರುತಿ ನಾಯ್ಕ, ಮಾರುತಿ ನಾಯ್ಕ ,ವಿಕಾಸ ನಾಯ್ಕ ಇದ್ದರು.
Leave a Comment