• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿ

February 9, 2022 by Jayaraj Govi Leave a Comment

IMG 20220208 WA0184

ಯಲ್ಲಾಪುರ :  ಪೋಲಿಸರು ಹೆಚ್ಚು ಒಳ್ಳೆ ಯವರಾದರೂ ,ಕೆಟ್ಟವರಾದರೂ  ತೊಂದರೆ ನೇ  ಅವರಿಗೆ , ಪೊಲೀಸ್ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುವದೆಂದರೆ ಸವಾಲಿನ ಕೆಲಸವೇ ಆಗಿದೆ.  ಅದರ ನಡುವೆಯೂ  ಪೋಲಿಸ ಇಲಾಖೆ ಹಾಗೂ ಜನ ಸಾಮಾನ್ಯರ ನಡುವೆ ಅನ್ಯೋನ್ಯತೆಯ ಭಾವ ಮೂಡಿಸುವ ಸದುದ್ದೇಶದಿಂದ ಸಾರ್ವಜನಿಕರ ನೆರವಿನಿಂದ ನವೀಕರಿಸಲಾಗಿರುವ ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು

IMG 20220208 WA0182


ಅವರು ಪಟ್ಟಣದ ಪೊಲೀಸ್ ಠಾಣೆಯ ನವೀಕೃತ ಆವರಣ ಹಾಗೂ ಹಿರಿಯ ನಾಗರಿಕರ, ಮಹಿಳಾ-ಮಕ್ಕಳ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಅವರು, ಪೊಲೀಸ್‌ರನ್ನು ಕಂಡಲ್ಲಿ ಭ್ರಷ್ಟರಿಗೆ ಭಯ ಮೂಡಬೇಕು. ಅಂದಲ್ಲಿ ಮಾತ್ರ ಸಮಾಜದ ಶಾಂತಿ ಸ್ಥಾಪನೆ ಹಾಗೂ ರಕ್ಷಣೆ ಸಾಧ್ಯ. ಶಿಷ್ಠರ ರಕ್ಷಣೆ, ದುಷ್ಟರಿಗೆ ಶಿಕ್ಷೆ ನೀಡುವ ಕಾರ್ಯವನ್ನು ಪೊಲೀಸ್ ಇಲಾಖೆಯು ಸಮರ್ಥವಾಗಿ ನಿರ್ವಹಿಸುತ್ತ ಬಂದಿದೆ. ಸದಾ ಒತ್ತಡದ ಜೀವನ ಶೈಲಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಇಂತಹ ಸುಂದರ ಠಾಣೆಯ ಆವರಣವು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ. ಸಿಪಿಐ ಸುರೇಶ ಯಳ್ಳೂರ್ ಅವರ ಈ ಉತ್ತಮ ಕಾರ್ಯಕ್ಕೆ ನಮ್ಮ ಇಲಾಖೆಯ ಪರವಾಗಿ, ಸಮಸ್ತ ಯಲ್ಲಾಪುರ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರ ಸಹಕಾರದಿಂದ ಇಂತಹ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ನಮ್ಮ ಕ್ಷೇತ್ರದಲ್ಲಾಗಲಿ ಎಂದರು.

IMG 20220208 112955 scaled


ರಾಜ್ಯ ವಿಕೇಂದ್ರೀಕರಣ ಯೋಜನೆ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ,  ಹಿಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಲು ಹೆದರುವಂತಿತ್ತು. ಆದರೆ ಇಂದಿನ ಈ ಜನಸ್ನೇಹಿ ಠಾಣೆಯ ಚಿತ್ರಣವನ್ನು ನೋಡಿದರೆ,  ಆ ಭಯವನ್ನು ಹೋಗಲಾಡಿಸಿ   ವಿಹಾರಕ್ಕಾಗಿ ಯೂ  ಪೋಲಿಸ ಸ್ಠೇಶನ ಗೆ ಹೋಗಿಬರುವ ಹಾಗೆ  ಮಾಡಿದ್ದು ವಿಶೇಷವಾಗಿದೆ. ಸುಂದರ ಚಿತ್ರಗಳು ಜಾಗೃತಿ ಮೂಡಿಸುವದರೊಂದಿಗೆ ನೋಡುಗರ ಕಣ್ಮನ  ಸೆಳೆಯುವಂತೆ ಮಾಡಿದೆ. ಎಂದರು.

IMG 20220208 123423 scaled


ಡಿವೈಎಸ್‌ಪಿ ರವಿ ನಾಯ್ಕ ಮಾತನಾಡಿ,  ಈಗ ಠಾಣೆಯಲ್ಲಾಗಿರುವ ಪರಿವರ್ತನೆಯನ್ನು ನೋಡಿದಾಗ ಠಾಣೆಯ ಎಲ್ಲ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಸಾಬೀತಾಗುತ್ತದೆ. ಠಾಣೆಯ ಇಂದಿನ ಸ್ಥಿತಿ ಜನತೆ ನಿರ್ಭೀತಿಯಿಂದ ಠಾಣೆಗಳಿಗೆ ಬರುವಂತೆ ಮಾಡುತ್ತದೆ. ಸಿಬ್ಬಂದಿಗಳ ಕಾರ್ಯ ಕ್ಷಮತೆಯನ್ನೂ ಸಹ ಹೆಚ್ಚಿಸಲಿದೆ ಎಂದರು.


ವಾ.ಕ.ರಾ.ರ.ಸಾ. ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, ಪೋಲಿಸ ಇಲಾಖೆ ಕೆಲವರ ಅಧಿಕಾರರೂಢ ಆಡಳಿತದ ಕೈಗೊಂಬೆ ಎಂಬAತಾಗದೇ ಬಡವರಪರ ನ್ಯಾಯ ದೊರಕಿಸಿಕೊಡುವಂತಾಗಬೇಕು. ಇಂತಹ ಸಕಲ ಸೌಲಭ್ಯವುಳ್ಳ ಪೋಲಿಸ್ ಠಾಣೆ ಜನಸಾಮಾನ್ಯರ ಪರವಾದಾಗ ಮಾತ್ರ ಅದರ ಸಾರ್ಥಕತೆಯಾದಂತಾಗುತ್ತದೆ. ಯಲ್ಲಾಪುರದ ಜನತೆ ಠಾಣೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಸಿಪಿಐ ಸುರೇಶ ಯಳ್ಳೂರ್ .ಮಾತನಾಡಿ  ಜನತೆ ನಿರ್ಭೀತರಾಗಿ, ನೇರವಾಗಿ ಠಾಣೆಗೆ ಬಂದು ತಮ್ಮ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವAತಾಗಬೇಕು. ಸಣ್ಣ ಮಕ್ಕಳಿಗೆ  ಅಂಗನವಾಡಿÀ ಕೇಂದ್ರದAತೆ, ವಿದ್ಯಾರ್ಥಿಗಳಿಗೆ ಮಾಹಿತಿ ಆಗರ , ನೊಂದವರಿಗೆ ಸಾಂತ್ವನ ನೀಡುವ ಉದ್ಧೇಶದಿಂದ ಠಾಣೆಯನ್ನು ನವೀಕರಿಸಲಾಗಿದೆ ಮುಂದಿನ ದಿನಗಳಲ್ಲಿ ಇಲಾಖೆಯ ಸಹಯೋಗದೊಂದಿಗೆ  ಕರಾಟೆ ಕುಂಗಪೂ ನಂತಹ ಸಮರಕಲೆ ತರಭೆತಿ ಕೇಂದ್ರವನ್ನು ಆರಂಭಿಸಲಾಗುವದು ಎಂದರು.
ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್,   ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಮುಖ್ಯಾಧಿಕಾರಿ ಸಂಗನಬಸಯ್ಯ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ,ಉದ್ಯಮಿ ಬಾಲಕೃಷ್ಣ ನಾಯಕ, ಪ್ರಮುಖರಾದ ವಿಜಯ ಮಿರಾಶಿ, ಮುರುಳಿ ಹೆಗಡೆ, ಎಮ್.ಜಿ. ಭಟ್ಟ ಸಂಕದಗುAಡಿ, ಪ.ಪಂ. ಮಾಜಿ ಅಧ್ಯಕ್ಷ ಶಿರೀಶ್ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಫಿಕಾ ಹಳ್ಳೂರ್ ವೇದಿಕೆಯಲ್ಲಿದ್ದರು.
ಪೋಲಿಸ ಸಿಬ್ಬಂದಿ ಮಹಾಂತೇಶ ಕಡಪಟ್ಟಿ ಪ್ರಾರ್ಥಿಸಿದರು. ಪಿಎಸ್ ಐ ಮಂಜುನಾಥ ಗೌಡರ ಸ್ವಾಗತಿಸಿದರು. ಪಿಎಸ್ ಐ ಪ್ರಿಯಾಂಕಾ ನ್ಯಾಮಗೌಡ ವಂದಿಸಿದರು.ಕೇಬಲ್ ನಾಗೇಶ ನಿರ್ವಹಿಸಿದರು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,063 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...