
ಯಲ್ಲಾಪುರ: ಪೌರ ಕಾರ್ಮಿಕರು ಪಟ್ಟಣ ಪಂಚಾಯತ ಆಸ್ತಿ , ನೀವು ಸಹಾ ನಗರವನ್ನೂ ಸ್ವಚ್ಚ ಗೊಳಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದಲ್ಲಿ ಮುಂದಿನ ದೀನಗಳಲ್ಲಿ ಪಟ್ಟಣ ಪಂಚಾಯತದಿಂದ ಹೆಚ್ಚಿನ ಸಹಾಯವನ್ನೂ ಮಾಡಲಾಗುವುದು ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಪಟ್ಟಣ ಪಂಚಾಯತ ಸಭಾಭವನದಲ್ಲಿ 24.10% ಅನುಧಾನದಲ್ಲಿ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರ ವಿತರಿಸಿ ಮಾತನಾಡಿದರು.ಮುಖ್ಯಾಧಿಕಾರಿ ಸಂಗನಬಸಯ್ಯಾ ಮಾತನಾಡಿ .
ನಿಮ್ಮ ಆರೋಗ್ಯದ ರಕ್ಷಣೆ ಜೊತೆ ನಗರ ಸ್ವಚ್ಚತೆಯಿಂದ ಕೂಡಿದಲ್ಲಿ ಪ್ರತಿಯೊಬ್ಬರು ಸುರಕ್ಷಿತವಾಗಿರುತ್ತಾರೆ, ಆದ್ದರಿಂದ ನಗರದ ಪ್ರತಿ ಜನರ ರಕ್ಷಣೆ ಜವಾಬ್ದಾರಿ ನಿಮ್ಮ ಮೇಲಿರುವ ಕಾರಣ ಮೊದಲು ಸ್ವಚ್ಚತಾ ಪರಿಕರಗಳ ಜೊತೆ ಕಾರ್ಯ ನಿರ್ವಹಿಸಿ ನಿಮ್ಮನ್ನು ಅನಾರೊಗ್ಯದಿಂದ ರಕ್ಷಿಸಿಕೊಳ್ಳಿ ಎಂದರು
ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ, ಸೊಮೇಶ್ವರ ನಾಯ್ಕ, ರಾಜು ನಾಯ್ಕ, ನೊಡಲ್ ಆಪೀಸರ್ ಹೆಮಾವತಿ ಭಟ್ಟ ಉಪಸ್ಥಿತರಿದ್ದರು.
.
Leave a Comment