
ಯಲ್ಲಾಪುರ : ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿAದ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ನಗರದ ಕಾರ್ಯಾ

ಲಯದಲ್ಲಿ ಆಚರಿಸಲಾಯಿತು.
ರಾಜ್ಯ ಸಮಿತಿಯ ಅಧ್ಯಕ್ಷ ಸುಭಾಷ್ ಕಾನಡೆ ಸಂತ ಗುರು ರವಿದಾಸ್ ಅವರ ಜೀವನ ಕುರಿತು ಮತ್ತು ಅವರ ಸಾಧನೆ ಕುರಿತು ಉಪನ್ಯಾಸ ನೀಡಿದರು.ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿದರು. ಡಾ|| ಬಾಬಾ ಸಾಹೇಬ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ್ ರೇವಣಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಲ್ಲಾಪುರದಲ್ಲಿ ಮೊದಲನೇ ಬಾರಿಗೆ ಸಂತ ರವಿದಾಸ್ ಅವರ ಜಯಂತಿ ಆಚರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯಕ್ರಮ ಅಚ್ಚುಕಟ್ಟಾಗಿ ವಿಜೃಂಭಣೆಯಿAದ ಮಾಡಬೇಕು ಎಂದರು.
ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಸಂಘದ ಉಪಾಧ್ಯಕ್ಷ ರವಿ ಪಾಟಣಕರ , ಸಂಘದ ಕಾರ್ಯದರ್ಶಿ ಸಂತೋಷ್ ಪಾಟಣಕರ ಸ್ವಾಗತಿಸಿದರು . ಶ್ರೀನಿಧಿ ಮೊರಸ್ಕರ ನಿರೂಪಿಸಿದರು. ಸಮಾಜ ಪ್ರಮುಖರು ಸಂಘದ ಸದಸ್ಯರು ಸಂತ ರವಿದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
Leave a Comment