
ಯಲ್ಲಾಪುರ :ಭಾರತ ದೇಶದ ವೀರ ಹೋರಾಟಗಾರ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಮರ ಸಾರುವ ಮೂಲಕ ಇಡೀ ದೇಶವನ್ನು ವೀರ ಛತ್ರಪತಿ ಶಿವಾಜಿ ಮಹಾರಾಜರು ಧರ್ಮ ರಕ್ಷಣೆ ಮಾಡಿದರು.ಎಂದು ಮೈಸೂರಿನ ಧಾತ್ರಿ ಶ್ರೀನಿವಾಸ್ ಹೇಳಿದರು.
ಅವರು ಪಟ್ಟಣದ ಶಿವಾಜಿವೃತ್ತದಲ್ಲಿ ವೀರ ಶಿವಾಜಿ ಸೇನೆ ಸಂಘಟನೆ ಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ನಿಮಿತ್ತ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.ಹಿರಿಯ ಮುಖಂಡ ರಾಮು ನಾಯ್ಕ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಸ್ವಾಭಿಮಾನ ಹಾಗೂ ಭಾರತದ ಏಕತೆ, ಅಖಂಡತೆಯ ಪ್ರತೀಕ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯ ಸೋಮಣ್ಣ ನಾಯ್ಕ ಮಾತನಾಡಿ
ಶಿವಾಜಿಯವರ ಅವರ ದಿಟ್ಟತನದಿಂದ ಭಾರತದಲ್ಲಿ ಹಿಂದು ಸಾಮ್ರಾಜ್ಯ ಗಟ್ಟಿಯಾಗಿ ಉಳಿಯಲು ಸಾಧ್ಯವಾಯಿತು. ಸಮಾಜದ ಎಲ್ಲಾ ವರ್ಗದ ಜನರನ್ನೂ ಸಮಾನವಾಗಿ ನೋಡಿದ ಶಿವಾಜಿಯವರನ್ನು ಪ್ರತಿಯೊಬ್ಬ ಭಾರತೀಯನೂ ಪೂಜನೀಯ ಭಾವದಿಂದ ನೋಡುತ್ತಾರೆ ಎಂದರು.ಈ ಸಂಧರ್ಭ ದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದಾ ದಾಸ್,ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣ ಕರ್,ಸದಸ್ಯ ಸತೀಶ ನಾಯ್ಕ,ಪ್ರಮುಖ ರಾದ ಎಮ್ ಆರ್ ಹೆಗಡೆ, ಡಾ. ರವಿ ಭಟ್ ಬರಗದ್ದೆ,ಪ್ರಸಾದ ಹೆಗಡೆ ಮುಂತಾದವರು ಇದ್ದರು.ನಂತರ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಶಿವಾಜಿ ಪ್ರತಿಮೆಯ ಮೆರವಣಿಗೆ ನಡೆಯಿತು
Leave a Comment