ಯಲ್ಲಾಪುರ: ಇಡೀ ಸಮಾಜ ಶಿಕ್ಷಕರನ್ನು ಗಮನಿಸುತ್ತದೆ. ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಬಿ ಆರ್ ಸಿ ಸಮನ್ವಯಾಧಿಕಾರಿಗಳಾದ ಶ್ರೀರಾಮ ಹೆಗಡೆ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಯಲ್ಲಾಪುರ ತಾಲೂಕಾ ಸಮಾಜವಿಜ್ಞಾನ ಶಿಕ್ಷಕರ ವೇದಿಕೆ ಆಶ್ರಯದಲ್ಲಿ ಸಮಾಜವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನ
ವಿಷಯ ಶಿಕ್ಷಕರೆಲ್ಲ ಸೇರಿ ತಯಾರಿಸಿದ ಸಾಧನೆಯ ಮೆಟ್ಟಿಲು ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಹೊತ್ತಿಗೆ ಪರೀಕ್ಷಾ ಪೂರಕ ಸಾಹಿತ್ಯವಾಗಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಕರೆನೀಡಿದರು
. ನಂತರ ನಡೆದ ತಾಲೂಕಾ ಮಟ್ಟದ ಸವಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹಿತ್ಲಳ್ಳಿ ಪ್ರಥಮ, ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ದ್ವಿತೀಯ, ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ ತೃತೀಯ ವಾಯ್ ಟಿ.ಎಸ್. ಎಸ್ ಪ್ರೌಢಶಾಲೆ ನಾಲ್ಕನೇ ಹಾಗೂ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ ಐದನೇ ಸ್ಥಾನ ಪಡೆದವು. ಮುಖ್ಯಾಧ್ಯಾಪಕ ದೇವಿದಾಸ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶ್ರೀಧರ ಹೆಗಡೆ ಕ್ವಿಜ್ ನಡೆಸಿಕೊಟ್ಟರು. ಸಂಘದ ಅದ್ಯಕ್ಷರಾದ ನಾಗರತ್ನಾ ನಾಯಕ ಮತ್ತು ಕಾರ್ಯದರ್ಶಿ ರಾಘವೇದ್ರ ಹೆಗಡೆ ನಿರ್ವಹಿಸಿದರು.
Leave a Comment