
ಯಲ್ಲಾಪುರ ; ಸಚಿವ ಕೆ ಎಸ್ ಈಶ್ವರಪ್ಪನವರು ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಈಶ್ವರಪ್ಪನವರ ಹೇಳಿಕೆ ದೇಶದ ಪ್ರಜೆಗಳಿಗೆ ದಿಗ್ರಮೆ ಉಂಟು ಮಾಡಿದೆ. ಕೂಡಲೆ ಈಶ್ವರಪ್ಪನವರನ್ನು
ಸಚಿವ ಸಂಪುಟದಿAದ ಕೈಬಿಟ್ಟು, ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ರಾಷ್ಟ್ರದ ಗೌರವವನ್ನು ಎತ್ತಿ. ಹಿಡಿಯಬೇಕು ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಆಗ್ರಹಿಸಿದರು. ಅವರುಪಟ್ಟಣದಲ್ಲಿ ಸೋಮವಾರ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ದಿಂದ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಹಾರಿಸುತ್ತೆವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪನವರ ಹೇಳಿಕೆಯ ವಿರುದ್ಧ ಮತ್ತು ಅವರನ್ನು ತಕ್ಷಣವೇ ಸಚಿವ ಸಂಪುಟದಿAದ ವಜಾಗೊಳಿಸಿ ಈಶ್ವರಪ್ಪ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸಬೇಕೆಂದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದರು.ಗ್ರೇಡ -೨ ತಹಶೀಲ್ದಾರ ಸಿ.ಜಿ ನಾಯ್ಕ ಮನವಿ ಸ್ವೀಕರಿಸಿದರು.
,ಈ ಸಂದರ್ಭದಲ್ಲಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್, ಪ್ರಮುಖರಾದ ದೇವಿದಾಸ ಶಾನಭಾಗ, ದಿಲೀಪ ರೋಕಡೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅನಿಲ್ ಮರಾಟೆ, ಬ್ಲಾಕ್ ಮಹಿಳಾ ವಿಂಗ್ ಅಧ್ಯಕ್ಷೆ ಪೂಜಾ ನೇತ್ರೇಕರ, ಕಾರ್ಯದರ್ಶಿ ಸರಸ್ವತಿ ಗುನಗಾ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್ ಕೆ ಭಟ್ ಮೆಣಸುಪಾಲ, ಪ್ರಿಯದರ್ಶಿನಿ ಅಧ್ಯಕ್ಷೆ ಮುಶರತ್ ಶೇಖ್, ತಾಲ್ಲೂಕು ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಫೈರೋಜ್ ಸೈಯದ್, ವಕೀಲೆ ಬಿ.ಬಿ ಅಮೀನಾ ಶೇಖ್, ಗಜಾನನ ಭಟ್,ರವಿಚಂದ್ರ ನಾಯ್ಕ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Leave a Comment