
ಯಲ್ಲಾಪುರ :ಕಾಡಿನ ಕೌತುಕ ಅರಿಯಲು ನಾವು ಕಾಡಿನ ಜೊತೆಗೆ ಹೆಜ್ಜೆಹಾಕಬೇಕಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಜೀವವೈವಿಧ್ಯ ಗುರುತಿಸಿ ರಕ್ಷಿಸುವ ಕೆಲಸವಾಗಬೇಕಿದೆ. ಪಶ್ಚಿಮಘಟ್ಟಗಳು ಜೀವ ವೈವಿಧ್ಯದ ನೆಲೆಯಾಗಿದ್ದು ಸಂಶೋಧನಾತ್ಮಕವಾಗಿ ಮಹತ್ವ ಪಡೆದಿದೆ..ಎಂದು ನಿವೃತ್ತ ಕಲಾ ಶಿಕ್ಷಕ ಜಿ ಎಸ್ ಗಾಂವ್ಕಾರ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಪರಿಸರ ಸಂವರ್ಧಿನಿ ಇಕೋ ಕ್ಲಬ್ ಸಂಯುಕ್ತವಾಗಿ ಹಮ್ಮಿಕೊಂಡ ಪರಿಸರ ಕಲಿಕೆಯ ವನದರ್ಶನ ಕ್ಷೇತ್ರಕಾರ್ಯದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡುತ್ತಾ ನಮ್ಮ ಪರಿಸರವು ನಮ್ಮನ್ನು ಬದುಕಿಸಿದೆ. ಪರಿಸರದ ಒಂದು ಭಾಗವಾಗಿ ನಾವು ಪರಿಸರದ ರಕ್ಷಣೆಯ ಜವಾಬ್ಧಾರಿ ಹೊತ್ತರೆ ನಮ್ಮ ಕೊಡುಗೆ ಮುಂದಿನ ಜನಾಂಗಕ್ಕೆ ಸಿಗಬಲ್ಲದು. ಕಾಡಿನ ಕತೆಗಳ ಹಿಂದೆ ಮನುಷ್ಯನ ಆಶ್ರಯದ ಮೂಲ ಅಡಗಿದೆ. ಕಾಡಿನ ಕಾಳಜಿ ಪ್ರತಿಯೊಬ್ಬರ ಕರ್ತವ್ಯ ಆಗಬೇಕಿದೆ. ನೆಲದಲ್ಲಿ ಹಸಿರಿದ್ದರೆ ಸಮೃದ್ಧಿಯಾಗಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಕಾಡಿನ ನಡುವಿನ
ಸಸ್ಯಸಂಕುಲಗಳನ್ನು ಪರಿಚಯಿಸಿ ಮಾತನಾಡಿದರು.
ಶಿಕ್ಷಕರಾದ ಚಿದಾನಂದ ಹಳ್ಳಿ, ಎಸ್ ಟಿ ಬೇವಿನಕಟ್ಟಿ, ರವೀಂದ್ರ ಗಾಂವ್ಕಾರ, ಗಿರೀಶ ಹೆಬ್ಬಾರ ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು.
ಪರಿಸರ ಸಂವರ್ಧಿನಿ ಇಕೋ ಕ್ಲಬ್ ನ ಮಾರ್ಗದರ್ಶಕಿ ಶಿಕ್ಷಕಿ ಸರೋಜಾ ಭಟ್ಟ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ಇಕೋ ಕ್ಲಬ್ ನ ಸಂಚಾಲಕಿ, ಶಿಕ್ಷಕಿ ಸುಮಂಗಲಾ ವರ್ಣೆಕರ್ ಕೊನೆಯಲ್ಲಿ ವಂದಿಸಿದರು.
Leave a Comment