ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಆಲೆಮನೆ ಹಬ್ಬ ಸಮಿತಿ ಆಶ್ರಯದಲ್ಲಿ ಐದನೇ ವರ್ಷದ ಆಲೆಮನೆ ಹಬ್ಬ ಸಂಭ್ರಮದಿಂದ ಜರುಗಿತು, ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಾರತ ಮಾತೇ ಭಾವಚಿತ್ರ ಮೆರವಣಿಗೆ ಮೂಲಕ ಹಾಲು ಉತ್ಪಾದಕರ ಸಂಘದ ಆವಾರದಲ್ಲಿ ಬಂದು ಭಗವಾಧ್ವಜಾರೋಹಣ ಮಾಡಿ ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ಚಾಲನೆ ನೀಡಿದರು. ರಾಷ್ಟ್ರತೆ, ಭಗವದ್ಗೀತೆ ಪಠಣ ನಡೆಯಿತು.
ಸಂಘದ ಅವಾರದಲ್ಲಿ ರಂಗೋಲಿ ತಳಿರು ತೋರಣ ವಿದ್ಯುತ ದೀಪಾಲಂಕಾರದಿಂದ ಸಿಂಗಾರ ಗೊಂಡು ಹಬ್ಬದ ಶೋಭೆ ಹೆಚ್ಚು ತ್ತು, ಮಹಾದ್ವಾರಕ್ಕೆ ಪೌರಾಣಿಕ ಕಲ್ಪನೆ ನೀಡುವ ಇಂದ್ರಪ್ರಸ್ಥ ಎಂದು ಹೆಸರಿಡಲಾಗಿತ್ತು.ಉಚಿತವಾಗಿ ಕಬ್ಬಿನ ಹಾಲುಮಸಾಲೆ . ಮಂಡಕ್ಕೆ ಮಿರ್ಚಿಗಳು ವಿತರಿಸುವ 5 ಕೌಂಟರ್‌ಗಳಿಗೆ ಇಂದ್ರಪ್ರಸ್ಥದ ಪ್ರಮುಖ ನಗರಗಳಾದ ಆವಂತಿ, ವಾರಣಾವತ್, ಕುಶ ಸ್ಥಳ, ವೃಶಸ್ಥಳ ಹಸ್ತಿನಾಪುರ ಎಂದು ನಾಮಕರಣ ಮಾಡುವ ಮೂಲಕ ವೈಶಿಷ್ಟ್ಯತೆ ಮರೆಯಲಾಗಿತ್ತು.
ಒಂದು ಕಾಲದಲ್ಲಿ ಆಲೆಮನೆ ಮಲೆನಾಡಿಗರಬದುಕಿನ ಒಂದು ಭಾಗವಾಗಿತ್ತು. ಅಪರೂಪವಾಗುತ್ತಿರುವ ಅಲೆಮನೆ ಹಬ್ಬಆಯೋಜಿಸುವುದು ಸುಲಭದ
ಮಾತಲ್ಲ ಬಂದವರೆಲ್ಲರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳುವ ಸಂಘಟಕರಿಂದ ಗ್ರಾಮೀಣ ಜನಮನಸೂರೆಗೊಂಡಿತು.
ಖ್ಯಾತ ಪರಿಸರ ತಜ್ಞ.ಶಿವಾನಂದ ಕಳವೆ, ಭೇಟಿ ನೀಡಿ
ಮಾಗೋಡ್ ಆಲೆಮನೆ ಹಬ್ಬ ಸಂಘಟನೆಯ ಅಚ್ಚರಿ, ಕೃಷಿ ಖುಷಿಯ ಮಾದರಿ ಮಲೆನಾಡಿನ ಎಲ್ಲರ ಅಕ್ಕರೆಯ ಆಲೆಮನೆ ಮರೆಯಾಗುತ್ತಿರುವ ಕಾಲದಲ್ಲಿ ಇದಕ್ಕೆ ಈಗ ಹಬ್ಬದ ಸ್ಪರ್ಶ ಬಂದಿದೆ,ಪ್ರವಾಸೋದ್ಯಮ ಆಯಾಮ ದೊರಕಿದೆ. ಸಿಹಿ ಕಬ್ಬಿನ ಹಾಲು, ಮಸಾಲೆ ಮಂಡಕ್ಕಿ ಮಿರ್ಚಿಗಳು ಜನರನ್ನು ಸೆಳೆದು ಖುಷಿಯ ಸೆಲೆ ಚಿಮ್ಮಿಸಿದೆ. ಮಾಗೋಡ್ ಹಳ್ಳಿಗರು ಆಲೆಮನೆ ಹಬ್ಬಕ್ಕೆ ಜನರನ್ನು ಕರೆದು ಉಚಿತ ಆತಿಥ್ಯ ನೀಡಿ ಬೆರಗು ಮೂಡಿಸಿದ್ದಾರೆ. ನೂರಾರು ಕಾರ್ಯಕರ್ತರ ಪರಿಶ್ರಮ, ಶಿಸ್ತು ಅತ್ಯುತ್ತಮ ಸಂಘಟನೆಯ ಮಾದರಿ ಪರಿಚಯಿಸಿತು ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಕಬ್ಬಿನ ಹಾಲಿನಿಂದ ಸಿದ್ಧಪಡಿಸಿದ ಬೆಲ್ಲ ತೊಡದೇವು ಮುಂತಾದ ವಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ವಿವಿಧ ಖಾದ್ಯಗಳನ್ನು ಮಾಡಲಾಗಿತ್ತು,ಗೋವರ್ಧನ ವೇದಿಕೆಯಲ್ಲಿ ಯಕ್ಷ ಗಾನ ವೈಭವ, ಸಂಗೀತ ಕಾರ್ಯಕ್ರಮ ಯಕ್ಷ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
ತಾಲೂಕಿನಿಂದ ಮಾತ್ರವಲ್ಲದೆ ಗುಂದ,ಕಾರವಾರ, ಅಂಕೋಲಾರ, ಹಳಿಯಾಳ, ಕುಮಟಾ ಹೀಗೆ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಸುಮಾರು 10 ಸಾವಿರ ಜನ ಆಗಮಿಸಿದ್ದರು.
Leave a Comment