• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿಜಾಬ್ ಮತ್ತು ಕೇಸರಿ ಅಥವಾ ಹಿಂದೂ ಮುಸ್ಲಿಂ ನಡುವಿನ ವಿವಾದವಲ್ಲ.

February 24, 2022 by Jayaraj Govi Leave a Comment

IMG 20220222 181004

ಯಲ್ಲಾಪುರ : ಹಿಜಾಬ್ ವಿವಾದ ಶಾಲಾ ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರಕ್ಕೆ ಸಂಬAಧಿಸಿದ ವಿಷಯವಾಗಿದೆ. ಈ ವಿವಾದವನ್ನು ಹಿಂದೂ ಧರ್ಮದ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಜೋಡಿಸಿ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಪ್ರಯತ್ನಿಸುತ್ತಿರುªವರನ್ನು ಬಲವಾಗಿ  ಖಂಡಿಸುತ್ತಿದ್ದೇವೆ ಎಂದು ಹಿಂದೂ ಸಂಘಟನೆಗಳ ಪ್ರಮುಖ ರಾಮು ನಾಯ್ಕ ಹೇಳಿದರು.
ಅವರು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ ಇದು ಕೇವಲ ಹಿಜಾಬ್ ಹಾಗೂ ಸಮವಸ್ತ್ರದ ನಡುವಿನ ವಿವಾದವೇ ಹೊರತು, ಹಿಜಾಬ್ ಮತ್ತು ಕೇಸರಿ ಅಥವಾ ಹಿಂದೂ ಮುಸ್ಲಿಂ ನಡುವಿನ ವಿವಾದವಲ್ಲ. ಮುಸ್ಲಿಂ ವಿದ್ಯಾರ್ಥಿಗಳು, ಇನ್ಯಾರದೋ ಮಾತು ಕೇಳಿ ತಮ್ಮ ಮೂಲಭೂತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಆಯಾ ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರಕಾರದ ಹಾಗೂ ಸದ್ಯ ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ, ಹಿಜಾಬ್ ಧರಿಸುವಿಕೆಯ ಕುರಿತು ಸದ್ಯ ಕೋರ್ಟಿಗೆ ಹೋದವರೂ ಸಹ ಮುಸ್ಲಿಂ ವಿದ್ಯಾರ್ಥಿಗಳೇ ಆಗಿದ್ದಾರೆ. ಹೀಗಾಗಿ ನ್ಯಾಯಾಲಯದ ತೀರ್ಪಿಗೆ ಕಾಯಬೇಕಾದವರೂ ಸಹ ಅವರೇ.
, ಕಾನೂನು ಬಾಹೀರವಾಗಿ ರಸ್ತೆಗೆ ಇಳಿಯುವುದನ್ನು ಮುಸ್ಲಿಂ ಸಮುದಾಯ ಕೈ ಬಿಡಬೇಕು. ಬಳೆ, ಕುಂಕುಮ, ಕಾಲುಂಗುರ, ಮಂಗಲಸೂತ್ರ ಇತ್ಯಾದಿಗಳು ಈ ದೇಶದ ಮೂಲಧಾರೆ. ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ.  . , ಈ ದೇಶದ ಬಹುಸಂಖ್ಯಾತ ಹಿಂದು ಸಮಾಜ ಸಹ ರಸ್ತೆಗೆ ಇಳಿದರೆ, ಅದರಿಂದಾಗುವ ಪರಿಣಾಮ ಬಹಳ ಭೀಕರ, ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.ಎಂದರು.
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ  ಗಾಂವಕರ ಮಾತನಾಡಿ ಹಿಂದುಧರ್ಮದ ಬಗ್ಗೆ  ಹಿಂದು ದೇಶದ ಬಗ್ಗೆ ಅಥವಾ ಇನ್ಯಾರದೋ ರಾಜಕೀಯ ತೆವಲಿಗಾಗಿ ಈ ದೇಶದ ಧರ್ಮ, ಪದ್ಧತಿ, ಸಂಪ್ರದಾಯಗಳನ್ನು ಅವಹೇಳನ ಮಾಡುವ ಅಥವಾ ದೇಶದ ಭದ್ರತೆಗೆ ಅಪಾಯ ತರುವ ರೀತಿಯಲ್ಲಿ  ಮುಸ್ಲಿಂರ ವರ್ತನೆ ಮುಂದುವರೆದರೆ, ಅದಕ್ಕೆ ತಕ್ಕ ಉತ್ತರ ನೀಡಲು  ನಾವು ಸಿದ್ಧರಿದ್ದೇವೆ.ಮೊದಲು ನಾವು ಹಿಂದೂನಂತರ ಪಕ್ಷದ ಪ್ರತಿನಿಧಿ ಹಿಂದೂಗಳ ಭಾವನೆಗಳಿಗೆ ,ಧಕ್ಕೆಯಾದರೆ ಅದನ್ನು ತೀಕ್ಷಣವಾಗಿ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಸೋಮೇಶ್ವರ ನಾಯ್ಕ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನಾರಾಯಣ ನಾಯಕ, ದುರ್ಗಾ ಮಂಡಲದ ಅಧ್ಯಕ್ಷೆ ನಮಿತಾ ಬಿಡಿಕರ್, ಶ್ಯಾಮಿಲಿ ಪಾಟಣಕರ, ಹಿಂದೂ ಸಮುದಾಯದ ಪ್ರಮುಖರಾದ  ಅನಂತ್ ಗಾಂವ್ಕರ್, ಸಂತೋಷ ಗುಡಿಗಾರ, ಬಾಬು ಬಾಂದೇಕರ್, ಪ್ರಸಾದ ಹೆಗಡೆ, ಪ್ರದೀಪ್ ಯಲ್ಲಾಪುರಕರ್, ಶ್ರೀರಾಮ ಸೇನೆ ಕಿರವತ್ತಿ ಪ್ರಮುಖ ಪ್ರಭು ಚಿಚಕಂಡಿ ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Other

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...