
ಯಲ್ಲಾಪುರದ: ಪಟ್ಟಣದ ಈಶ್ವರ ಗಲ್ಲಿಯಲ್ಲಿರುವ ಪುರಾತನ ಈಶ್ವರ ದೇವಸ್ಥಾನಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷÀ ಪೂಜೆ, ಸಲ್ಲಿಸಿದರು.

ಈಶ್ವರ ದೇವರು ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಜಾಗೃತ ದೇವರುೆ ಎಂದು ಖ್ಯಾತಿ ಹೊಂದಿದ್ದು ಇಲ್ಲಿನ ವಿಶೇಷವೆಂದರೆ ಭಕ್ತರೇ ಶಿವರಾತ್ರಿ ದಿನದಂದು ಮಾತ್ರವಲ್ಲದೇ ಉಳಿದ ದಿನಗಳಲ್ಲೂ ನೇರವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಬಹುದಾಗಿದೆ. ಮಂಗಳವಾರ ಶಿವರಾತ್ರಿ ದಿನದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಮಡಿಯಲ್ಲಿ ಬಂದು ಶಿವನಿಗೆ ಅಭಿಷೇಕ ,ಬಿಲ್ವಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ್ಲ ದೇವಸ್ಥಾನ ದೇವಸ್ಥಾನzಲಿÀ ಅಯೋಜಿಸಿದ್ದ ವಿದ್ವಾನ ದತ್ತಾತ್ರೆಯ ಚಿಟ್ಟೇಪಾಲ ಅವರ ಸಂಗೀತ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಉದ್ಯಮಿ ಬಾಲಕೃಷ್ಣ ನಾಯಕ ,ಸಂತೋಷ ಗುಡಿಗಾರ, ಆದಿತ್ಯ ಗುಡಿಗಾರ ಮುಂತಾದವರು ಇದ್ದರು
ತಾಲೂಕಿನಾದ್ಯಂತ ಇಡಗುಂದಿಯ ರಾಮಲಿಂಗೆಶ್ವರ, ಕವಡಿಕೇರಿ, ದೋಣಗಾರ,ಬಿಲ್ಲಿಗದ್ದೆ, ಸೇರಿದಂತೆ ಶಿವಾಲಯಗಳಲ್ಲಿ ಮಹಾಶಿವರಾತ್ರಿಯ ಆಚರಣೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ಶಿವರಾತ್ರಿ ಆಚರಣೆಯು ಈ ವರ್ಷ ಸಂಭ್ರಮದಿAದ ಶಿವ ದೇವಾಲಯಗಳಲ್ಲಿರುದ್ರಾಭಿಷೇಕ,ಮಹಾಭಿಷೇಕ,ಬಿಲ್ವಾರ್ಚನೆ ಮುಂತಾದ ಪೂಜಾ ಕೈಂಕರ್ಯಗಳು ನಡೆದವು.
Leave a Comment