
ಯಲ್ಲಾಪುರ :ಹಳ್ಳಿಗೆ ಪಟ್ಟಣವನ್ನು ಕರೆತರುವ ಕೆಲಸ ಈ ಆಲೆಮನೆ ಹಬ್ಬ ಮಾಡುತ್ತಿದೆ. ನವರಸಗಳನ್ನು ಅಭಿವ್ಯಕ್ತಿಸುವ ವೇದಿಕೆ ಪರಂಪರೆಯ ಉಳಿಸುವ ಕಾರ್ಯಗಳು ಹಳ್ಳಿಗಳ ಈಹಬ್ಬಗಳಿಂದ ಸಾಧ್ಯ. ಎಂದು ಪಂಚಾಯತ ರಾಜ್ ಇಲಾಖೆ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ವಜ್ರಳ್ಳಿಯ ರಸೋತ್ಸವ ಸಮಿತಿ ಹಮ್ಮಿಕೊಂಡ ಆಲೆಮನೆ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಯ ಜನರ ಬದುಕು ಬರಿದಾಗಬಾರದು. ಮತ್ತೆ ಹಳ್ಳಿಯ ವೈಭವಕ್ಕೆ ಆಲೆಮನೆ ಹಬ್ಬ ಜಾತ್ರೆ ಕಾರಣವಾಗಬೇಕು. ಅಭಿವೃದ್ಧಿಯ ಆದ್ಯತೆಯು ಹಳ್ಳಿ ಕೇಂದ್ರೀಕೃತವಾದರೆ. ಮೂಲಭೂತ ಸ ಜೀವರಸ ಬತ್ತಿಹೋಗದಂತೆ ಎಚ್ಚರವಹಿಸೋಣ. ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ
ಗೋವರ್ಧನ ಗೋ ಶಾಲೆಯ ಗಣಪತಿ ಭಟ್ಟ, ಕೂಲಿಬೇಣ ಮಾತನಾಡಿ ಪೌಷ್ಟಿಕ ಗುಣದ ಕಬ್ಬಿನ ಹಾಲಿನ ಸೇವನೆ ರೋಗ ನಿರೋಧಕ ಶಕ್ತಿ ಹೊಂದಿದೆ. ಹಳ್ಳಿಯ ಜೀವನಕ್ಕೆ ಆಧಾರವಾಗಬಲ್ಲ ಗೋಸೇವೆಯ ಕೈಂಕರ್ಯ ಕ್ಕೆ ಎಲ್ಲರೂ ಕೈ ಜೋಡಿಸಬೇಕು.
ಅಧ್ಯಕ್ಷತೆಯನ್ನು ರಸೋತ್ಸವ ಸಮಿತಿಯ ಅಧ್ಯಕ್ಷ ಮಹೇಶ ಗಾಂವ್ಕಾರ, ಸಾಂಬೇಕುಂಬ್ರಿ ವಹಿಸಿದ್ದರು
ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಕೋಣೆಮನೆ , ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾಗೇಂದ್ರ ಹೆಗಡೆ ಕೋಣೆಮನೆ. ರಸೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ ಕುಂಬ್ರಿ, ಉಪಸ್ಥಿತರಿದ್ದರು.
ರಸೋತ್ಸವ ಸಮಿತಿಯ ಸಂಚಾಲಕರಾದ ವಿ ಎನ್ ಭಟ್ಟನಡಿಗೆಮನೆ, ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಗಾಂವ್ಕಾರ, ನಿರೂಪಿಸಿದರು.ಆದರ್ಶ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ
ಜಿ.ವಿ.ಭಟ್ಟ, ಅಡಿಕೆಮನೆ ವಂದಿಸಿದರು.
Leave a Comment