
ಯಲ್ಲಾಪುರ:
ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಯುವ ಬಳಗ,ಕನ್ನಡ ಸಂಸ್ಕೃತಿ ಇಲಾಖೆ,ಕಸಾಪ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾವ್ಯ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಕವಿಗಳಾದ ಸುಬ್ರಾಯ ಬಿದ್ರೆಮನೆ,ದತ್ತಾತ್ರಯ ಕಣ್ಣಿಪಾಲ್, ಗಣಪತಿ ಕಂಚಿಪಾಲ್,ಡಿ.ಜಿ.ಭಟ್ಟ ಧುಂಡಿ,ರೇಖಾ ಭಟ್ಟ,ವನರಾಗ ಶರ್ಮಾ,ಮಧುರಾ ಗಾಂವ್ಕಾರ,ಸತ್ಯನಾತಾಯಣ ಚಿಮ್ನಳ್ಳಿ ಕವಿತೆ ವಾಚಿಸಿದರು.
ದಯಾನಂದ ದಾನಗೇರಿ ಸುಶ್ರಾವ್ಯವಾಗಿ ಹಾಡಿದರು.ದತ್ತಾತ್ರಯ ಚಿಟ್ಟೆಪಾಲ್ ಹಾರ್ಮೋನಿಯಂ,ಪ್ರದೀಪ ಕೋಟೆಮನೆ ತಬಲಾಸಾಥ್ ನೀಡಿದರು.ಶ್ರುತಿ ಹೆಗಡೆ ಕೊಣೆಮನೆ ನಿರೂಪಿಸಿದರು.
Leave a Comment