
ಯಲ್ಲಾಪುರ : ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ವಿಜೃಂಭಣೆಯಿAದ ಆಚರಿಸಲಾಯಿತು.ಶಿವಲಿಂಗಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಪಂಚಾಮೃತ ಅಭಿಷೇಕ,ಏಕರುದ್ರಾಭಿಷೇಕ, ಕ್ಷಿರಭಿಷೇಕ ನವಧಾನ್ಯ ಅಭಿಷೇಕ್ ಹಾಗೂ ವಿಶೇಷ ಬೆಳ್ಳಿಯ ಪ್ರಭಾವಳಿ ಹಾಗೂ ಹೂವಿನ ಅಲಂಕಾರ ,ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಿತು. ಬಂದಿದ್ದ ಪ್ರತಿಯೊಬ್ಬ ಭಕ್ತರಿಗೂ ಭಿಲ್ವಪತ್ರೆಯನ್ನು ಅಲ್ಲಿಯೇ ನೀಡಿ ಶಿವನಿಗೆ ಮುಡಿಸಲು ಅವಕಾಶಕಲ್ಪಿಸಿದ್ದು ವಿಶೆಷವಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಣ್ಣು ಕಾಯಿ ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು ದೇವಸ್ಥಾನ ದ ಹೂವಿನ ಹಾಗೂ ವಿದ್ಯುತದೀಪಾಲಂಕಾರ ಕಣ್ಮನ ಸೆಳೆಯಿತು.
Leave a Comment