ಹಳಿಯಾಳದ ಮರಾಠ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಜಿಲ್ಲಾಧ್ಯಕ್ಷರಾದ ಸಂದೀಪಕುಮಾರ ಬೋಬಾಟಿ ಮಾತನಾಡಿ 2020 – 21 ನೇ ಸಾಲಿನಲ್ಲಿ ಹಳಿಯಾಳದ ಸಕ್ಕರೆ ಕಾರ್ಖಾನೆಯು 10 ಲಕ್ಷಕ್ಕೂ ಹೆಚ್ಚು ಟನ್ ಕಬ್ಬು ನುರಿಸಿದ್ದನ್ನು ನಾವು ಸ್ವಾಗತ ಮಾಡುತ್ತೇವೆ.
ಆದರೆ ಇನ್ನೂ ಸ್ಥಳೀಯವಾಗಿ ಸುಮಾರು 60% ಶೇಕಡಾದಷ್ಟು ಕಬ್ಬು ಉಳಿದಿದೆ ಯಾವ ಕಾರಣಕ್ಕಾಗಿ ಈ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಬಿಸಿಲಿನಿಂದಾಗಿ ಸುಮಾರು ನೂರಕ್ಕೂ ಹೆಚ್ಚು ಏಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಈ ಸಮಸ್ಯೆಯನ್ನು ಬಗೆಹರಿಸಿ ಸೂಕ್ತ ಪರಿಹಾರ ನೀಡಬೇಕು. ಉತ್ತರ ಕನ್ನಡದ ಜಿಲ್ಲಾಧಿಕಾರಿಯವರು ರೈತರು ಮತ್ತು ಕಾರ್ಖಾನೆ ನಡುವೆ ದ್ವಿಪಕ್ಷಿಯ ಮಾತುಕತೆ ಮಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆದಷ್ಟು ಬೇಗ ಅವರು ಸಮಸ್ಯೆಗೆ ಪರಿಹಾರ ನೀಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಸ್ಥಳೀಯ ಕಬ್ಬನ್ನು ನುರಿಸದೆ ಹೋದರೆ ಹೊರ ಊರಿನಿಂದ ಬರುವ ಕಬ್ಬನ್ನು ತಡೆಯಬೇಕಾಗುತ್ತದೆ ಎಂದರು. ಶಂಕರ ಕಾಜಗಾರ, ಅಶೋಕ ಮೇಟಿ, ಎಮ್. ವಿ. ಘಾಡಿ, ಶಿವು ದೇಸಾಯಿ ಸ್ವಾಮಿ, ಅಪ್ಪಾಜಿ ಶಾಪೂರಕರ, ಅರುಣ್ ಮೇತ್ರಿ, ಅಗ್ನೇಲ್, ಅರುಣ್ ಗೊಂದಳಿ, ಡಿ. ವಾಯ್. ಡಾoಗೆ ಉಪಸ್ಥಿತರಿದ್ದರು.
Haliyal News ; Join our whatsapp group
Leave a Comment