ಯಲ್ಲಾಪುರ: ಪ್ರತಿಯೊಂದು ಗ್ರಾಮಗಳಲ್ಲಿ ಜಲಮೂಲಗಳಿರುವ ಮನೆಗಳನ್ನು ಗುರುತಿಸಿ ಅವರಿಂದ ಧೃಡಿಕರಣ ಪತ್ರವನ್ನು ಪಿಡಿಓ ಗಳು ಪಡೆದುಕೊಂಡು ಕಂಪೂಟರ ನಲ್ಲಿ ದಾಖಲಿಸಬೇಕು. ಯಾವದೇ ಬಾವಿ ಬೊರವೆಲ್ ಇಲ್ಲದಿರುವ ಮನೆಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿನೀರಿನ ಸಂಪರ್ಕ ಕಲ್ಪಿಸಲಾಗುವದು .ಈಗಾಗಲೇ ಪ್ರಕ್ರಿಯೆ ಶುರುವಾಗಿದೆ.ಎಂದು ಜಿಲ್ಲಾಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ಹೇಳಿದರು.
ಅವರು ಪಟ್ಟಣ ವ್ಯಾಪ್ತಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನಂತರ ಇಡಗುಂದಿಯಲ್ಲಿ ಪಿಡಿಓಗಳ ಸಭೆ ನಡೆಸಿ ನಂತರ ಮಾತನಾಡಿದರು.ಇದಕ್ಕೂ ಮುನ್ನ ಪಟ್ಟಣದ ತಾಪಂ ಸಮೀಪ ನಿರ್ಮಿಸಲಾಗುತ್ತಿರುವ ಜಿಲ್ಲಾ ಪಾಲಿಕ್ಲಿನಿಕ್ ಗೆ ಭೇಟಿ ನೀಡಿ ಕಟ್ಟಡ ನಿರ್ಮಾಣದ ಪ್ರಗತಿ ವೀಕ್ಷಿಸಿ ಚರಂಡಿ,ಕAಪೌAಡ ಮಾರ್ಚನಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಪಶು ವೈದ್ಯ ಡಾ ಶ್ರೀನಿವಾಸ ಹಾಗೂ ಸಿಬ್ಬಂದಿಗಳಿAದ ಅಲ್ಲಿಯ ಕಾರ್ಯ ವೈಖರಿ ಕುರಿತು ಮಾಹಿತಿ ಪಡೆದುಕೊಂಡರು
.ನAತರ ಅಂಬೆಡ್ಕರ ಭವನದಲ್ಲಿ ಸಿದ್ದಿ ಸಮುದಾಯದವರಿಗೆ ಆಹಾರ ಧಾನ್ಯ ವಿತರಿಸುವ ಸ್ಥಳಕ್ಕೆ ತೆರಳಿ ಫಲಾನುಭವಿಗಳಿಂದ ಈ ಕುರಿತು ಮಾಹಿತಿ ಪಡೆದುಕೊಂಡರು .ಎಲ್ಲಿಂದ ಆಹಾರಧಾನ್ಯ ಸರಬರಾಜು ಆಗುತ್ತಿದೆ, ಗುಣಮಟ್ಟ ಹೇಗಿದೆ ಎಂದು ವಿಚಾರಿಸಿದರು. ಪಟ್ಟಣದ ತರಕಾರಿ ಮಾರ್ಕೆಟ ಬಳಿ ಇರುವ ಎಲ್ ಎ ಎಮ ಪಿ ಎಸ್ ಶಾಖೆ ಗೆ ಭೇಟಿ ನೀಡಿ . ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಸರ್ಕಾರದ ವನಧನ ಯೋಜನೆಯಡಿ ಕಿರವತ್ತಿ ಹಾಗೂ ಯಲ್ಲಾಪುರಕ್ಕೆ ತಲಾ ೧೫ ಲಕ್ಷ ರೂ ಮಂಜೂರಾಗಿದೆ.ಅದರಲ್ಲಿ ೧೦ ಲಕ್ಷ ರೂ ಬಂದಿದ್ದು ಅದರ ವಿನಿಯೋಗ ಕುರಿತು ಮಾಹಿತಿ ಪಡೆದುಕೊಂಡರು ಅಧ್ಯಕ್ಷ ರಾಮನಾಥ ಸಿದ್ದಿ ಮಾತನಾಡಿ ಜೇನುತುಪ್ಪ ಶುದ್ದಿಕರಣ ಘಟಕ ಯಂತ್ರ ಕ್ಕೆ ೨ ಲಕ್ಷ ರೂ, ಹಾಗೂ ಸಿದ್ದಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಜೇನು ಸಕಾಣಿಕೆ ತರಭೇತಿ ,ಅವುಗಳಿಗೆ ಬೇಕಾಗುವ ಪರಿಕರಗಳ ಕಿಟ್‌ನ್ನು ಒದಗಿಸಲಾಗುತ್ತದೆ ೩೦ ಸಂಘಗಳಿAದ .೧೩೦ ಸದಸ್ಯರಿಗೆ ತರಭೇತಿ ನೀಡಲಾಗಿದೆ .ಎಂದರು. ಜಿಪಂ ಕಾನಿ ಪ್ರಿಯಾಂಗಾ ಅವರು ಟೆಂಡರ್ ಕರೆಯದೇ ಯಂತ್ರ ಖರೀದಿಗೆ ಹೇಗೆ ಮಾಡಿದಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಯೋಜನೆ ಎಲ್ಲರಿಗೂ ಸರಿಯಾಗಿ ತಲುಪುವಂತೆ ಕಾರ್ಯ ನಿರ್ವಹಿಸಿ ಎಂದು ಅಲ್ಲಿದ್ದ ಅಧಿಕಾರಿಗೆ ಸೂಚಿಸಿದರು.
ತಾಲೂಕಿನ ಉಪಳೇಶ್ವರ ವ್ಯಾಪ್ತಿಯ ಯರಕನ ಬೈಲ್ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಿ ಯಾವ ಯಾವ ಸಸ್ಯಗಳು ಎಷ್ಟು ಇವೆ ಎಲ್ಲೆಲ್ಲಿ ವಿತರಿಸಲಾಗುತ್ತದೆ ಎಂದು ಮಾಹಿತಿ ಪಡೆದುಕೊಂಡರು.
ಜೆಜೆಎಮ ಯೋಜನೆಯಡಿ ವೈಯಕ್ತಿಕ ಜಲಮೂಲ ಇರುವದರ ಕುರಿತು ಧೃಢಿಕರಣ ನೀಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಈ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ—-
ಜಗದೀಶ ಕಮ್ಮಾರ ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ.
ಕಂಪ್ಲಿ ಜನತಾ ಕಾಲೋನಿಗೆ ತೆರಳಿ ಅಲ್ಲಿ ನೀರಿನ ಓವರ್ ಹೆಡ್ ಟ್ಯಾಂಕ್ ನಿಂದ ಸಮರ್ಪಕ ನೀರು ಸರಬರಾಜು,ಸಂಪರ್ಕ ದ ಕುರಿತು ಪರಿಶೀಲಿಸಿದರು. ಅಲ್ಲಿ ೪,೫ ದಿನಕ್ಕೆ ಒಮ್ಮೆ ನೀರು ಬರುತ್ತದೆ ಎಂದು ಸಾರ್ವಜನಿಕರು ತಿಳಿಸಿದಾಗ ಸಿಬ್ಬಂದಿಗೆ ಎರಡು ದಿಗಳಿಗೊಮ್ಮೆ ನೀರು ಬಿಡುವಂತೆ ಸೂಚಿಸಿದರು.ಕೂಸಾಗುಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಯ ದುರಸ್ತಿ ಕಾಮಗಾರಿ ಪರಿಶೀಲಿಸಿ ,ಶಾಲೆಯಲ್ಲಿಯೇ ಗ್ರಾಮಪಂಚಾಯತ ಡಿಜಿಟಲ್ ಲೈಬ್ರರಿ ಇರುವದನ್ನು ಕಂಡು ಈರೀತಿಯಾದರೆ ಗ್ರಾಮಸ್ಥರಿಗೆ ಇದರ ಸದುಪಯೋಗವಾಗುವದಿಲ್ಲ ಅವರಿಗೆ ಲಭ್ಯವಾಗುವಂತೆ ಸಮೀಪದ ಸ್ಥಳದಲ್ಲಿ ಮಾಡಬೇಕು ಎಂದು ಹೇಳಿದರು. ಹೀಗೆ ವಿವಿಧ ಕಡೆಗಳಲ್ಲಿ ಖುದ್ದಾಗಿ ಭೇಟಿ ನೀಡಿ ತಾಲೂಕಾಡಳಿತದಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಪಿಡಿ ಓ ರುದ್ರಯ್ಯಾ ಹಿರೇಮಠ,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮನೀಶ್,ಕಾರ್ಯ ನಿರ್ವಾಹಕ ಇಂಜಿನೀಯರ ಪ್ರಕಾಶ, ದರ್ಶನ, ರಾಜೇಶ್ವರಿ ಕದಂ ,ಕಂಪ್ಲಿ ಗ್ರಾಪಂ ಅಧ್ಯಕ್ಷ ವಿನಾಯಕ ನಾಯ್ಕ, ಇಡಗುಂದಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಸಿದ್ದಿ, ಮುಂತಾದವರು ಇದ್ದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment