ಯಲ್ಲಾಪುರ : ತಾಲೂಕಿನ ಹುತ್ಕಂಡದ ಹನುಮಂತಕೊಪ್ಪದ ಹನುಮಂತದೇವರ ದೇವಸ್ಥಾನದ
ಪ್ರತಿಷ್ಠಾಪನಾ ಮಹೋತ್ಸವದ ೨೦ ನೇ ವರ್ಧಂತಿ ಉತ್ಸವ ಶುಕ್ರವಾರ ವಿವಿಧಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ದಿಂದ ಜರುಗಿತು.
ವೇದಮೂರ್ತಿ ವೆಂಕಟ್ರಮಣ ಭಟ್ಟ ಬೆಳಖಂಡ ಅವರ ಪೌರೋಹಿತ್ಯದಲ್ಲಿ ಶ್ರೀ ದೇವರ
ಸನ್ನಿಧಿಯಲ್ಲಿ ಗಣಹವನ, ಉಪನಿಷತ ಪಾರಾಯಣ,ಪುರುಷಸೂಕ್ತ ಪಾರಾಯಣ, ರುದ್ರಾಭಿಷೇಕಮುಂತಾದ ದೇವತಾ ಕಾರ್ಯ ನಡೆಯಿತು . ಶೃದ್ಧಾ ಭಕ್ತಿಯಿಂದ ಭಕ್ತ ರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಹಣ್ಣು ಕಾಯಿ ಸೇವೆ ಸಮರ್ಪಿಸಿದರು.
ಮದ್ಯಾಹ್ನ ಅನ್ನ ಪ್ರಸಾದ ವಿತರಣೆ ಹಾಗೂ ಸಂಜೆ ,ಫಲಾವಳಿಗಳಸವಾಲು,ಮಕ್ಕಳಿಂದ ವಿವಿಧ ಸಾಂಸ್ಕೃತಿಕಕಾರ್ಯಕ್ರಮ,, ನಡೆಯಿತು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment