
ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಆಸೋಸಿಯೇಷನ್ ಆಯೋಜಿಸಿದ್ದ. ಕಳೆದ ೨೦ ದಿನಗಳಿಂದ ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದ ಯಲ್ಲಾಪುರ ಪ್ರೀಮಿಯಂ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿ ಎಸ್.ಜೆ. ರಾಕರ್ಸ ತಂಡ ರನ್ರ‍್ಸ್ ಅಪ್ ಸ್ಥಾನ ಗಳಿಸಿತು.
ಎಂಟು ತಂಡಗಳೊAಗಿದೆ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗೌತಮ್ ಕಾಮತ ಪಂದ್ಯ ಪುರುಷೋತ್ತಮ ಹಾಗೂ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಗಳಿಸಿದರು, ಮೀರ್ ಜಾಫರ್ ಉತ್ತಮ ಬಾಲರ್. ವಿಶಾಲ ಅಸುಕರ್ ಉತ್ತಮ ವಿಕೆಟ್ ಕೀಪರ್, ಅಮಿತ ಗುನಗಿ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಗಳಿಸಿದರು. ಪ್ರತೀ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಲಾಯಿತು.

ಉದ್ಯಮಿ ಬಾಲಕೃಷ್ಣ ನಾಯಕ, ಹಿರಿಯ ಕ್ರಿಕೆಟ್ ಆಟಗಾರ ನಾಗರಾಜ ಮದ್ಗುಣಿ, ಗ್ರಾಮ ಪಂಚಾಯ್ತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ, ಪ್ರಮುಖರಾದ ಸದಾಶಿವ ಚಿಕ್ಕೊತ್ತಿ, ನಾಗಪ್ಪ ಲಮಾಣಿ, ಇಬ್ರಾಹಿಂ ಶೇಖ, ಪ್ರದೀಪ ಯಲ್ಲಾಪುರಕರ, ಗೋಪಾಲಕೃಷ್ಣ ತಾಂಡೂರಾಯನ್,ಮಾರುತಿ ನಾಯ್ಕ ಬಹುಮಾನ ವಿತರಿಸಿ ಮಾತನಾಡಿದರು.
ವಿಕಾಸ ನಾಯ್ಕ, ರಜತ ಬದ್ದಿ,ರಾಹುಲ ಮಹಾಲೆ, ನಾಗೇಂದ್ರ ಹೆಗಡೆ, ವೇದಿಕೆಯಲ್ಲಿದ್ದರು. ಯಲ್ಲಾಪುರ ಕ್ರಿಕೇಟ್ ಅಸೋಶಿಯೆಷನ್ ನ ಅಧ್ಯಕ್ಷ ಸತೀಶ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.
ಕ್ರೀಡಾ ಪ್ರೇಮಿಯಾಗಿ ಅನೇಕ ಪಂದ್ಯಾವಳಿ ಸಮಘಟಿಸಿದ್ದ ದಿವಂಗತ ಮಹೇಂದ್ರ ಮಹಾಲೆ ಅವರನ್ನು ಸ್ಮರಿಸಿಕೊಂಡು ಒಂದು ನಿಮಿಷ ಮೌನ ಆಚರಿಸಿ, ಅವರ ಕುಟುಂ¨sಸ್ಥರನ್ನು ಗೌರವಿಸಲಾಯಿತು. ಹುಟ್ಟಿದ ದಿನಾಂಕ ಹೇಳಿದರೆ, ವಾರ ಹೇಳುವ, ಯಾವುದೇ ಇಂಗ್ಲಿಷ್ ಶಬ್ದದ ಉಲ್ಟಾ ಸ್ಪೆಲಿಂಗ್ ಹೇಳುವ ಅಬ್ದುಲ್ ಮತೀನ ಶೇಖಗೆ ಗೌರವಿಸಲಾಯಿತು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment