ಕಾರವಾರ : ಅಪ್ರಾಪ್ತ ಬಾಲಕಿಯೊಂದಿಗೆ ಅಶ್ಲೀಲವಾಗಿ ತೆಗೆದುಕೊಂಡಿದ್ದ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬೆದರಿಕೆಯೊಡ್ಡುತ್ತಿದ್ದವನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ನಗರದಲ್ಲಿ ವಾಸವಿದ್ದು ವಿದ್ಯಾಬ್ಯಾಸ ಮಾಡುತ್ತಿದ್ದಾಳೆ. ಈ ಬಾಲಕಿಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿಯ ಹ್ಯಾಂಗೋ ಕಂಪನಿಯಲ್ಲಿ ಕೆಲಸಕ್ಕಿರುವ ಶ್ರೀಕಾಂತ ಕಾಂಬಳೆ ಎನ್ನುವಾತ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ಸಲುಗೆಯಿಂದಿದ್ದ.
ಈ ವೇಳೆ ಇಬ್ಬರೂ ಖಾಸಗಿಯಾಗಿ ತೆಗೆದುಕೊಂಡಿದ್ದ ಫೊಟೊಗಳನ್ನು ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸುತ್ತಿದ್ದು, ಆ ಪೋಟೋವನ್ನು ಬಾಲಕಿಯ ವಾಟ್ಸಪ್ ಗೂ ಕೂಡ ಕಳುಹಿಸಿ ಹೆದರಿಸುತ್ತಿದ್ದ ಎಂದು ಬಾಲಕಿ ತಿಳಿಸಿದ್ದಾಳೆ. ನೊಂದ ಬಾಲಕಿಯು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮುಂದಿ ಕ್ರಮವನ್ನು ಕೈಗೊಂಡಿದ್ದಾರೆ.
Leave a Comment