
ಯಲ್ಲಾಪುರ: ಕಳೆದೆರಡು ವರ್ಷ ಕೊರೋನ ಕಂಟಕ ದಿಂದ ನವವರ್ಷಾಚರಣೆಯ ಯುಗಾದಿಯ ಶೋಭಾಯಾತ್ರೆ ಸಾಧ್ಯ ವಾಗಿರಲಿಲ್ಲ.ಈ ಬಾರಿ ವಿಜೃಂಭಣೆಯಿಂದ ಯುಗಾದಿ ಆಚರಿಸಲು ಯುಗಾದಿ ಉತ್ಸವ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ಗೊಪಾಲಕೃಷ್ಣ ಗಾಂವಕರ್ ಹೇಳಿದರು,
ಅವರು ಶನಿವಾರ ಸಂಜೆಪಟ್ಟಣದ ವೇದ ವ್ಯಾಸ ಸಭಾ ಭವನ ದಲ್ಲಿ ಯುಗಾದಿ ಉತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಸಮಸ್ತ ಹಿಂದೂ ಭಾಂದವರು ತಾವೇ ಮುಖ್ಯಸ್ಥರು ಎಂಬಭಾವದಿಂದ ಎಲ್ಲರ ಸಹಭಾಗಿತ್ವ ದಲ್ಲಿ ಶೋಭಾ ಯಾತ್ರೆ ಯ ಯಶಸ್ಸಿಗೆ ಸಹಕರಿಸಬೇಕು .ಎಂದರಲ್ಲದೆ
ಉತ್ಸವದ ವಿವರ ನೀಡಿದ ಅವರು ಮಾ 30ರಂದು ಪಟ್ಟಣದ ಕಾಳಮ್ಮದೇವಿ ದೇವಸ್ಥಾನದಿಂದ ಪುರುಷ ರು ಹಾಗೂ ಮಹಿಳೆಯರಿಗಾಗಿ , ಬೃಹತ್ ಬೈಕ್ ರಾಲಿ ನಡೆಯಲಿದೆ.
ಯುಗಾದಿ ದಿನದಂದು ಶ್ರೀಕೋಟೇ ಕರಿಯವ್ವ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡಲಿದೆ. ಶೋಭಾಯಾತ್ರೆಯಲ್ಲಿ ಝಾಂಜ್ ಪಥಕ್ , ಹಾಗೂ ವಿವಿಧ ರೀತಿಯ ವಿವಿಧ ಟ್ಯಾಬ್ಲೋ ಹಾಗೂ ವಾದ್ಯತಂಡಗಳು ಭಾಗವಹಿಸಲಿವೆ . ಇದಕ್ಕಾಗಿ ಪಟ್ಟಣವನ್ನು ಭಗವಾ ಧ್ವಜ, ತಳಿರು ತೋರಣ, ರಂಗೋಲಿ ಹಾಕಿ ಅಲಂಕರಿಸಲು ಎಲ್ಲರೂ ಸಹಕರಿಸಬೇಕು ,ಈ ಕುರಿತು ಉತ್ಸವದ ಖರ್ಚು ವೆಚ್ಚಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಮಿತಿಯ ಖಜಾಂಚಿ ಪ್ರದೀಪ ಯಲ್ಲಾಪುರಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ,ಸಲಹೆ ಸೂಚನೆ ನೀಡಿದರು.ಸಂಚಾಲಕ ಜಗದೀಶ ಪೂಜಾರಿ, ಮಹಿಳಾ ಸಮಿತಿಯ ಪ್ರಮುಖರಾದ ಗಿರಿಜಾ ಮಾವಳ್ಳಿ, ನಮಿತಾ ಬಿಡಿಕರ್,ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ್,ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಆದಿತ್ಯ ಗುಡಿಗಾರ, ಸದಸ್ಯರಾದ ಸೋಮು ನಾಯ್ಕ, ಸತೀಶ ನಾಯ್ಕ, ಅಮಿತ್ ಅಂಗಡಿ,ಪ್ರಮುಖ ರಾದ ಸತ್ಯಭಾಮಾ ನಾಯ್ಕ,ಅಕ್ಷತಾ ನಾಯ್ಕ, ರಾಧಾ ಗುಡಿಗಾರ್,ಸುಧೀರ ಆಚಾರ್ಯ,ರಜತ್ ಬದ್ದಿ, ಶಿವು ಕವಳಿ , ವಿಶಾಲ ವಾಳಂಬಿ, ಸತೀಶ ಕಟ್ಟಿಗೆ, ರಾಮಕೃಷ್ಣ ಭಟ್ಟ, ಶ್ರೀಪಾದ ಭಟ್ಟ, ಮುಂತಾದವರು ಇದ್ದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment