ಹೊನ್ನಾವರ: ನಕಲಿ ಜನನ ಪ್ರಮಾಣ ಪತ್ರದ ಮೂಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾಳೆಂದು ಆರೋಪಿಸಿ ಮಹಿಳೆಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಗುರುವಾರ ದೂರು ದಾಖಲಾಗಿದೆ.
ಕಳೆದ ನಾಲ್ಕು ತಿಂಗಳಿಂದ ಚರ್ಚೆಗೆ ಗ್ರಾಸವಾಗಿದ್ದ,ಪ.ಪಂ ಸಭೆಯಲ್ಲಿ ಮಾರ್ದನಿಸಿದ್ದ ನಕಲಿ ಜನನ ಪ್ರಮಾಣ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯತ್ ಸದಸ್ಯರ ತರಾಟೆಯ ಬಳಿಕ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಆರೋಗ್ಯ ನಿರೀಕ್ಷಕ ಸುನೀಲ ಗಾವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೆರಂಗಡಿಯ ಮುಸ್ಲಿಂ ಕೇರಿಯ ರುಬೀನಾ ಆರ್ ಅಪಕಾರ ಎನ್ನುವ ವಿವಾಹಿತ ಮಹಿಳೆಯು ತನ್ನ ಗಂಡು ಮಗುವಿನ ಜನನ ಪ್ರಮಾಣ ಪತ್ರ ನಕಲು ಮಾಡಿರುವುದಲ್ಲದೇ ಹೊನ್ನಾವರ ಪಟ್ಟಣ ಪಂಚಾಯತಿಯ ನಕಲಿ ಮುದ್ರೆ, ನಕಲಿ ಡಿಜಿಟಲ್ ಬಾರ್ ಕೋಡ್ ಬಳಸಿದ್ದರು. ಪ್ರಮಾಣ ಪತ್ರ ತಿದ್ದುಪಡಿಗಾಗಿ ತಂದಾಗ ಸುಳ್ಳು ದಾಖಲಾತಿ ಹಾಗೂ ನಕಲು ಮುದ್ರೆ ಬಳಸುವ ಮೂಲಕ ಸರ್ಕಾರಕ್ಕೆ ವಂಚಿಸಿರವುದು ಬೆಳಕಿಗೆ ಬಂದಿತ್ತು.ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
Leave a Comment