
ಯಲ್ಲಾಪುರ-
ದೇಸಿತನದ ಸೊಗಸಿನಲ್ಲಿ ಸೌಂದರ್ಯವಿದೆ.ಯಾವುದೇ ಕ್ಷೇತ್ರದ ಸಾಧಕರ ಪುಣ್ಯಭೂಮಿ ಹಳ್ಳಿಗಳೇ ಆಗಿವೆ. ಕಾಡಿನ ಮೂಲೆಗಳಲ್ಲಿ ಹುಟ್ಟಿದ ಸಾಹಿತ್ಯ ಕೃತಿಗಳು ಜಗತ್ತನ್ನೇ ತಲುಪಿದ ಉದಾಹರಣೆ ಇದೆ. ಕಲೆ ಸಾಹಿತ್ಯ, ಸಂಸ್ಕೃತಿಗಳ ಪರಂಪರೆಯನ್ನು ಜತನದಿಂದ ಕಾಫಿಟ್ಟುಕೊಂಡು ಹೋಗುವ ಜವಾಬ್ದಾರಿಯು ನಮ್ಮ ಮೇಲಿದೆ.ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು .
ಅವರು ತಾಲ್ಲೂಕಿನ ವಜ್ರಳ್ಳಿಯ ಗಂಧಶಾಲಿಯ ಮನೆಯಂಗಳದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಬಳಗವು ಸಂಘಟಿಸಿದ್ದ ಸಾಹಿತಿ ವನರಾಗ ಶರ್ಮರವರ,” ಯುಗಯೋಗಿ ವಿವೇಕಾನಂದ”ಕೃತಿ ಲೋಕಾರ್ಪಣೆ ಮತ್ತು ಡಿ.ಜಿ ಭಟ್ಟ, ರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವನರಾಗ ಶರ್ಮಾ ರವರ ಯುಗಯೋಗಿ ವಿವೇಕಾನಂದ ಕೃತಿಯನ್ನು ಯುವ ಲೇಖಕಿ ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ಲೋಕಾರ್ಪಣೆಗೊಳಿಸಿ ಮಾತನಾಡಿ ಸಾಹಿತ್ಯದ ಬರವಣಿಗೆಗೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ. ಭಾವನಾತ್ಮಕವಾದ ಪ್ರಂಪಚವನ್ನು ಅನುಭವಿಸಿ ಬರೆಯುವ ವನರಾಗ ಶರ್ಮಾರವರ ಸಾಹಿತ್ಯದ ಓದು ಉದಯೋನ್ಮುಖರಿಗೆ ಮಾರ್ಗದರ್ಶಿಯಾಗಬಲ್ಲದು. ಜೀವನದ ಘಟನೆಗಳು ನಮ್ಮನ್ನು ಪ್ರಭಾವಿಸಿದಾಗಲೇ ಉತ್ತಮ ಸಾಹಿತ್ಯದ ರಚನೆಸಾಧ್ಯವಿದೆ. ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡದ ಪರಮಾತ್ಮಾಜೀ ಮಹಾರಾಜ್ ಮಾತನಾಡಿ ವನರಾಗ ಶರ್ಮರವರ, ಅಭಿನಂದನಾ ಗ್ರಂಥವನ್ನು ತರಲು ಈಗಾಗಲೇ ಸಿದ್ದತೆ ಮಾಡಿದ್ದು ಮೌಲಿಕ ಕೃತಿಯಾಗಿ ಸಾಹಿತ್ಯದ ಕ್ಷೇತ್ರದಲ್ಲಿ ದಾಖಲಾಗಲಿದೆ. ಎಂದರು.
ಮುಖ್ಯ ಅತಿಥಿಗಳಾಗಿ ಉಮೇಶ ಭಾಗ್ವತ, ಜಿ ಆರ್ ಭಾಗ್ವತ, ಭಗೀರಥ ನಾಯ್ಕ,ಜಿ ಎಸ್ ಗಾಂವ್ಕಾರ, ಜಿ.ವಿ ಭಟ್ಟ, ಅಡ್ಕೆಮನೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹೊನ್ನಗದ್ದೆ ಯ ವೀರಭದ್ರ ದೇವರ ಗುಡಿ ನಿರ್ಮಾಣ ಕಾರ್ಯದ ಮುಂದಾಳತ್ವವಹಿಸಿದ್ದ ಡಿ ಜಿ ಭಟ್ಟ, ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವೇಕಾನಂದ ಬಳಗದ ಕಾರ್ಯದರ್ಶಿ ನಾಗೇಂದ್ರ ಭಟ್ಟ ನಡಿಗೆಮನೆ ಸ್ವಾಗತಿಸಿದರು.
ಅಧ್ಯಕ್ಷ ಹಾಗೂ ಕೃತಿಕಾರ ವನರಾಗ ಶರ್ಮಾರವರು ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಜಿ ಎನ್ ಕೋಮಾರ ವಂದಿಸಿದರು. ದತ್ತಾತ್ರೇಯ ಭಟ್ಟ, ಕಣ್ಣಿಪಾಲ ನಿರೂಪಿಸಿದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಗ್ರುಪ್ ಸೇರಿ ; Yellapur news ; Join our whatsapp group
Leave a Comment