
ಯಲ್ಲಾಪುರ : ಉತ್ತಮ ಸಮಾಜ ನಿರ್ಮಾಣಆಗಬೇಕಿದ್ದರೆ, ಮಹಿಳೆಯರು ಪುರುಷರು ಸಮಬಲರೆಂಬ ಮನೋಸ್ಥಿತಿ ಸಮಾಜದಲ್ಲಿ ಸೃಷ್ಠಿಯಾಗಬೇಕುಎಂದುಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಅಧ್ಯಕ್ಷಆರ್.ಎನ್. ಹೆಗಡೆಗೋರ್ಸಗದ್ದೆ ಹೇಳಿದರು.

ಕೇಂದ್ರಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾಘಟಕ ಹಾಗೂ ತಾಲೂಕಾ ಘಟಕಗಳ ಸಂಯಕ್ತಆಶ್ರಯದಲ್ಲಿತಾಲೂಕಿನ ಮಂಚಿಕೇರಿಯಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಭಾಭವನದಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಮತ್ತು ಪದಗ್ರಹಣ ಸಮಾರಂಭ’ ಉದ್ಘಾಟಿಸಿ ಮಾತನಾಡಿ ಸಾವಿತ್ರಿಬಾಯಿ ಪುಲೇ ಮಹಿಳೆಯರ ಶಿಕ್ಷಣಕ್ಕಾಗಿ ಕ್ರಾಂತಿಕಾರಿ ಬದಲಾವಣೆ ಮಾಡಿರುವಕಾರಣಕ್ಕೆ ಮಹಿಳೆಯರು ಹೆಚ್ಚು ಶಿಕ್ಷಿತರಾಗುತ್ತಿದ್ದರೂ ಶಿಕ್ಷಣವನ್ನೂ ಮಧ್ಯದಲ್ಲಿಯೇ ಮೋಟಕುಗೊಳಿಸುತ್ತಿರುವವವರ ಸಂಖ್ಯೆಯೂಅಧಿಕವಿದೆ. ಈ ಕುರಿತು ಶಿಕ್ಷಣದ ಜಾಗೃತಿ ಮೂಡಿಸಬೇಕಿದೆ. ಇಂತಹ ಸಂಘಟನೆಯ ಮೂಲಕ ಬದಲಾವಣೆತರಬೇಕಾಗಿದೆಎಂದರು.
Àಅಧ್ಯಕ್ಷತೆ ವಹಿಸಿದ್ದ ಕೇಂದ್ರಕನ್ನಡ ಸಾಹಿತ್ಯ ವೇದಿಕೆಯಜಿಲ್ಲಾಧ್ಯಕ್ಷೆ ಶೀವಲೀಲಾ ಹುಣಸಗಿ ಮಾತನಾಡಿ, ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆ ಮುನ್ನಡೆಯುತ್ತಿರುವುದು ಸಮಾಜ ಪ್ರಗತಿಯತ್ತ ಸಾಗುತ್ತಿದೆಎಂಬುದನ್ನು ಸಾರುತ್ತಿದೆ. ಹೆಣ್ಣು ಮನೆಯ ಗೃಹ ಲಕ್ಷ್ಮಿ. ಅವಳನ್ನು ಸಬಲಗೊಳಿಸುವ ನಿಟ್ಟಿನಲ್ಲಿಎಲ್ಲರೂಕೈಜೋಡಿಸಬೇಕುಎಂದರು.
ಗಿರಿಜಾ ಸಿದ್ದಿ ಮಾತನಾಡಿ, ಬಹಳಷ್ಟು ಕಡೆಗಳಲ್ಲಿ ಸನ್ಮಾನ ಸಿಕ್ಕರೂ ಕೂಡ ಹುಟ್ಟುರಿನಲ್ಲಿಸಿಗುವ ಸನ್ಮಾನದ ಮೌಲ್ಯವೇ ಬೇರೆಯಾಗಿರುತ್ತದೆಇಂದುಇಲ್ಲಿ ಸಿಕ್ಕಿರುವ ಸನ್ಮಾನಕ್ಕೆಚಿರಋಣಿಎಂದರು. ಮನಸ್ವಿನಿ ವಿದ್ಯಾನಿಲಯದಅಧ್ಯಕ್ಷೆರೇಖಾ ಭಟ್ಟಕೋಟೆಮನೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದೇವಿ ಗೋವಿಂದ ಮೋಗೆರ್ ಗೋರ್ಸಗದೆ, ಪುಷ್ಪಾ ಮಾದೇವ ನಾಯ್ಕ ಕವಡಿಕೆರೆ, ಗಿರಿಜಾ ಪರಶುರಾಮ ಸಿದ್ಧಿ ಹಾಸಣಗಿಅನೇಸರ, ಮಣಿ ನಿಂಗಪ್ಪ ವಡ್ಡರ ಉಮಚಗಿ, ಗಿರಿಜಾಗುರುಪ್ರಸಾದ ಕೊಡಸಳ್ಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಕವಿಗೋಷ್ಠಿ ಹಾಗೂ ಪದಗ್ರಹಣಕಾರ್ಯಕ್ರಮ ನೆರವೇರಿತು.
ಭವ್ಯಾ ಶೆಟ್ಟಿ, ಪ್ರಭಾವತಿ ಗೋವಿ, ಸತೀಶ ಶೆಟ್ಟಿ, ಸುನಂದಾ ಪಾಟಣಕರ, ಸ್ವಾತಿ ನಾಯಕ ಸನ್ಮಾನ ಪತ್ರ ವಾಚಿಸಿದರು.ಸಪ್ತಮಿ ಬಂಕಾಪುರ ಭರತ ನಾಟ್ಯ ಪ್ರದರ್ಶಿಸಿದಳು. ಅತಿಥಿ ಭಟ್ಟ ಪ್ರಾರ್ಥಿಸಿದಳು. ರೇಖಾ ಭಟ್ಟ ಸ್ವಾಗತಿಸಿದರು. ಆಶಾ ಶೆಟ್ಟಿ ಪ್ರಾಸ್ತಾವಿಗೈದರು. ಶಿಕ್ಷಕ ನವೀನಕುಮಾರ ನಿರೂಪಿಸಿದರು. ಭಾರತಿ ನಲ್ವಡೆ ವಂದಿಸಿದರು.
Leave a Comment