
ಯಲ್ಲಾಪುರ:ತಾಲೂಕಿನ ಖಾರೆವಾಡ ಶಾಲೆಯಿಂದ ಪದೋನ್ನತಿ ಪಡೆದು ಮುಂಡಗೋಡಿಗೆ ವರ್ಗಾವಣೆ ಗೊಂಡಿದ್ದ ಶಿಕ್ಷಕ ಮಂಜುನಾಥ ಡಿ ಮಲ್ಯ , ಬೈಂದೂರು ಗೌಳಿವಾಡಾ ಸ ಕಿ ಪ್ರಾ ಶಾಲೆಯಿಂದ ವರ್ಗಾವಣೆ ಗೊಂಡ ಶಿಕ್ಷಕ, ಸಾಹಿತಿ ನಾಗರಾಜ ಎಂ ಹುಡೆದ ರವರನ್ನು ಕಿರವತ್ತಿಯ ಜಯ ಕರ್ನಾಟಕ ಸಂಘ,ಮಹಿಳಾ ಸಂಘ,ಕಿರವತ್ತಿಯ ಶಿಕ್ಷಕ ಬಳಗ,ಹಾಗೂ ಊರ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡುಗೆ
ಸಮಾರಂಭ ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ಹರೂನ ಶೇಖ,ಮಕ್ಸುದ ಅಲಿ ಶೇಖ,ಚಂದ್ರಕಾಂತ ಹನುಮರೆಡ್ಡಿ,ಸುಮಂಗಲಾ ಹನುಮರೆಡ್ಡಿ ಸುಭಾಸ ಹರಿಜನ,ದತ್ತುಹೆಂದ್ರೆ, ಚೆನ್ನಪ್ಪ ಹರಿಜನ,ರಾಜಾರಾಮ ಸ್ವಾಮಿ ರಬ್ಬಾನಿಯವರು,ಶಕುಂತಲಾ ನಾಯ್ಕ,ರುಕ್ಮಿಣಿ ನಾಯ್ಕ,ಶಾಂತಾ ಜಾಧವ್, ಮಮ್ತಾಜ ಶೇಖ ಹಾಗೂ ಶಿಕ್ಷಕರಾದ ಸದಾಶಿವ ಮಾದರ,ಅಶೋಕ ಹರಿಜನ, ನಾರಾಯಣ ಕಾಂಬ್ಳೆ,ಉದಯ ದೇವ್ಕರ, ಡಿ ಬಿ ಚಂದ್ರೇಗೌಡ,ಇಮ್ತಿಯಾಜ ಶೇಖ,ಮಹೇಶ ಮಡಿವಾಳ, ದಾದಫೀರ ಶೇಖ,ಹಾಗು ಇನ್ನು ಅನೇಕ ಜನ ಊರ ನಾಗರಿಕರು ಉಪಸ್ಥಿತ ರಿದ್ದರು.ಶಿಕ್ಷಕರಾದ ಪ್ರಕಾಶ ಕಾರ್ಯಕ್ರಮವನ್ನು ನಿರ್ವಹಿಸಿದರು, ಮಹೇಶ ಮಡಿವಾಳ ಪ್ರಾರ್ಥಿಸಿದರು,ಶ್ರೀ ಗಂಗಾಧರ ಎಸ್ ಎಲ್ ರವರು ಸರ್ವರನ್ನು ಸ್ವಾಗತಿಸಿದರು,ಶ್ರೀ ನಾರಾಯಣ ಕಾಂಬ್ಳೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
Leave a Comment