ಕಾರವಾರ: ಜಿಲ್ಲೆಯಲ್ಲಿ ಬೆಳೆ ರಕ್ಷಣೆ ಆಯುಧ ಪರವಾನಗಿ ಹೊಂದಿರುವವರಿಗೆ ಒಂದು ಬಾರಿ ವಿಶೇಷ ಅವಕಾಶ ನೀಡಿ, ಆಯಾ ತಾಲೂಕುಗಳಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
2021ರ ಡಿ.31ರಂತೆ ನವೀಕರಣಗೊಳ್ಳಬೇಕಾಗಿರುವ ಆಯುಧ ಪರವಾನಿಗೆದಾರರು ನಮೂನೆ ಎ-3ಯಲ್ಲಿ ಅರ್ಜಿ (ಅರ್ಜಿಯನ್ನು ತಹಶೀಲ್ದಾರ ಕಚೇರಿಯಲ್ಲಿ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಪಡೆಯಬಹುದು), ಮೂಲ ಆಯುಧ ಅನಿಜ್ಞಪ್ತಿ, ಎಸ್-3 ನಮೂನೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ, ಎಸ್-4 ನಮೂನೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದ ನಿರಾಕ್ಷೇಪಣಾ ಪತ್ರ, ಜಮೀನಿನ ಆರ್‌ಟಿಸಿ/ ಹಿಡುವಳಿ ಪ್ರಮಾಣ ಪತ್ರ ರೂ.2500ನ್ನು ಕೆ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ ಲೆಕ್ಕ ಶೀರ್ಷಿಕೆ 005500104000000ನೇದಕ್ಕೆ ಭರಣ ಮಾಡಿ, ಮೂಲ ಚಲನ್ (5 ವರ್ಷಗಳ ಅವಧಿ ನವೀಕರಣಕ್ಕೆ) ದಾಖಲೆಗಳೊಂದಿಗೆ ಆಯಾ ತಹಶೀಲ್ದಾರ ಕಚೇರಿಯಲ್ಲಿ ಏ.10ರೊಳಗೆ ತಮ್ಮ ಮೂಲ ಪರವಾನಗಿಯೊಂದಿಗೆ ಸಲ್ಲಿಸಬೇಕು.
ತದನಂತರ ಜಿಲ್ಲಾಧಿಕಾರಿಯವರು ಪ್ರತಿ ತಾಲೂಕಿಗೆ ಭೇಟಿ ನೀಡಿ ಆಯಾ ತಾಲೂಕುಗಳ ಆಯುಧ ಪರವಾನಗಿಗಳ ನವೀಕರಣ ಪ್ರಕ್ರಿಯೆಯನ್ನು ಅಲ್ಲಿಯೇ ಇತ್ಯರ್ಥಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆಯು ತಿಳಿಸಿದೆ.
- KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today
- ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
- ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts
- ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ನೇಮಕಾತಿ 2023
- ಕರ್ನಾಟಕ ಅರಣ್ಯ ಇಲಾಖೆ ಆನೆ ಕವಾಡಿಗ ನೇಮಕಾತಿ 2023 KFD New recruitment 2023 – Apply for Ane Kavadiga posts
Leave a Comment