ಯಲ್ಲಾಪುರ: ಕಳೆದೆರಡು ವರ್ಷಗಳಿಂದ ಕೊರೋನ ಕಂಟಕ ದಿಂದ ಮಂಕಾಗಿದ್ದ ಯುಗಾದಿ ಸಡಗರ ಈ ಬಾರಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಪತಾಕೆ, ಭಿತ್ತಿಪತ್ರಗಳು, ದೊಡ್ಡದಾದ ಪ್ಲೆಕ್ಸ್‌ಗಳು ರಾರಾಜಿಸುತ್ತಿದೆ.
ಇಂದು ಸಂಜೆ 4.15ಕ್ಕೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ ನಡೆಯಲಿದ್ದು ಈಗಾಗಲೆ ಬೈಕ್‌ಗಳಿಗೆ ಕೇಸರಿ ಧ್ವಜದ ಅಲಂಕಾರ ಪ್ರಾರಂಭವಾಗಿದೆ.
ಪ್ರತಿಹಿಂದುಗಳ ಮನೆಯ ಮುಂದೆ ಕೇಸರಿ ಧ್ವಜ ಕಟ್ಟಲು ಅಂಗಡಿಗಳಲ್ಲಿ ವಿವಿಧ ಬಗೆಯ ಕೇಸರಿ ಧ್ವಜಗಳ ಮಾರಾಟ ಭರದಿಂದ ಸಾಗಿದೆ. ಪಟ್ಟಣ ಈಗಾಗಲೇ ಪಟ್ಟಣದಲ್ಲಿ ರಸ್ತೆಯುದ್ದಕ್ಕೂ ಎಲ್ಲ ಕಡೆಗಳಲ್ಲಿ ಭಗವಾಧ್ವಜ, ತಳಿರು ತೋರಣಗಳಿಂದ ಸಿಂಗಾರಗೊಳ್ಳುತ್ತಿದೆ. ಮಹಿಳೆಯರು ಶ್ವೇತ ವರ್ಣದ ಚೂಡಿದಾರ ಹಾಗೂ ಕೇಸರಿ ದುಪ್ಪಟ್ಟಾ ಧರಿಸಿ ಬೈಕ್ ರ್ಯಾಲಿ ಯ ಶೋಭೆಯನ್ನು ಹೆಚ್ಚಿಸಲಿದ್ದಾರೆ.
ಏ 2ರಂದು ನಡೆಯುವ ನವವರ್ಸಾಚರಣೆಯ ಶೋಭಾಯಾತ್ರೆಯಲ್ಲಿ ಮಹಿಳೆಯರು ಬಾದಾಮಿ ಬಣ್ಣದ ಸೀರೆ ಕೇಸರಿ ರವಿಕೆ ಧರಿಸಿ ಭಾಗವಹಿಸುತ್ತಿದ್ದು, ಮೆರವಣಿಗೆಯ ಮೆರಗು ಬರಲಿದೆ.ಈ ಸಮವಸ್ತ ಕಡ್ಡಾಯವಲ್ಲ ಯಾವದೇ ಬಣ್ಣದ ಸೀರೆ, ಚೂಡಿದಾರ್ ಧರಿಸಿ ಯೂ ಬರಬಹುದು ಎಂದು ಸಮಿತಿಯವರು ತಿಳಿಸಿದ್ದಾರೆ .ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೂ, ಉತ್ಸವ ದ ಜವಾಬ್ದಾರಿ ಹೊತ್ತ ಸಮಿತಿಗೂ ಹೆಚ್ಚಿನ ಜವಾಬ್ದಾರಿ ಇದ್ದು ಯುಗಾದಿ ಉತ್ಸವದ ಯಶಸ್ಸಿಗಾಗಿ ಕಟಿಬದ್ಧರಾಗಿದ್ದಾರೆ.
Leave a Comment