• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಲ್ಲಾಪುರ ದಲ್ಲಿ ಅದ್ದೂರಿ ಯುಗಾದಿ ಉತ್ಸವ ಕ್ಕೆ ಸಕಲ ಸಿದ್ಧತೆ

March 30, 2022 by Jayaraj Govi Leave a Comment

IMG 20220329 161732 scaled

ಯಲ್ಲಾಪುರ:  ಯುಗಾದಿ ಉತ್ಸವ ಸಮಿತಿಯಿಂದ ನವವರ್ಷಾಚರಣೆಯಾದ ಯುಗಾದಿಯನ್ನು ಎರಡುದಿನಗಳ ಕಾಲ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಂಟಕದಿAದಾಗಿ ಶೋಭಾಯಾತ್ರೆ  ಸಾಧ್ಯವಾಗದೇ ಕೇವಲ ಪಂಚಾAಗ ಪಠಣವನ್ನು ಮಾತ್ರ ನಡೆಸಿ ಸಂಪ್ರದಾಯವನ್ನು ಪಾಲಿಸಲಾಗಿತ್ತು.  ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ್ ಹೇಳಿದರು. ಪಟ್ಟಣದ ವೆಂಕಟರಮಣ ಮಠದ ಸಭಾಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಉತ್ಸವದ ಕರಪತ್ರವನ್ನು ಬಿಡುಗಡೆಗೊಳಿಸಿ  ಮಾತನಾಡಿ  ಉತ್ಸವದ ಜಾಗೃತಿಗಾಗಿ ಮಾ. ೩೦ರಂದು ಮಹಿಳೆಯರಿಗೆ ಹಾಗೂ ಪುರುಷರಿಗೆ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ಸಂಜೆÀ  ೪.೧೫ ಕ್ಕೆ  ಪಟ್ಟಣದ ಶ್ರೀ ಕಾಳಮಾದೇವಿ ದೇವಸ್ಥಾನ ಬಳಿ ಚಾಲನೆ ನೀಡಲಾಗುವದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಮಹಿಳೆಯರು ಶ್ವೇತ ವರ್ಣದ ಚೂಡಿದಾರ ಹಾಗೂ ಕೇಸರಿ ದುಪ್ಪಟ್ಟಾ ಧರಿಸಿ ಬೈಕ್ ರ‍್ಯಾಲಿಯ ಶೋಭೆಯನ್ನು ಹೆಚ್ಚಿಸಲಿದ್ದಾರೆ.
ನಂತರ ಏ.೨ ರಂದು ಮಧ್ಯಾಹ್ನ ೩.೧೫ ರಿಂದ ಕೋಟೆಕರಿಯಮ್ಮ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದು. ಅಂಬೇಡ್ಕರ ನಗರ, ಗಾಂಧಿ ಚೌಕ, ಕಾರವಾರ ರಸ್ತೆ ,ಬಸವೇಶ್ವರ ವೃತ್ತ, ತಿಲಕಚೌಕಗಳಲ್ಲಿ ಸಾಗಿ ಗ್ರಾಮದೇವಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.ಶೋಭಾಯಾತ್ರೆಯಲ್ಲಿ
ಝಾಂಜ್ ಪತಾಕ್, ಚಂಡೆ ವಾದ್ಯ ಹಾಗೂ ಸುಮಾರು ೨೫ ಸ್ಥಬ್ಧಚಿತ್ರಗಳು ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.  ಸಿದ್ದಿ, ಗೌಳಿ, ಮರಾಠಿ ಸಮುದಾಯದವರ ನೃತ್ಯ ಕಲಾತಂಡಗಳು ಭಾಗವಹಿಸಲಿವೆ.ಸಂಜೆ ೭-೩೦ಕ್ಕೆ  ಸಭಾ ಕಾರ್ಯಕ್ರಮದಲ್ಲಿ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪಂಚಾAಗ ಪಠಣ ನೆರವೇರಿಸಲಿದ್ದು, ಅತಿಥಿಗಳಾಗಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ನಾಗೇಶ ಭಾಗ್ವತ, ಗೌಳಿ ಸಮಾಜದ ಪ್ರಮುಖ ಕೋಯಾ ಶೆಂಡಗೆ ಮಾದೇವಕೊಪ್ಪ, ವೈಶ್ಯವಾಣಿ ಸಮಾಜದ ಪ್ರಮುಖ ಅಶೋಕ ಕಿತ್ತೂರು ಆಗಮಿಸುವರು ಎಂದರು.
 ಎ.೩ರಂದು ಸಂಜೆ ೫ಗಂಟೆಗೆ ಗ್ರಾಮದೇವಿ ದೇವಸ್ಥಾನದ ಸಭಾಭವನದಲ್ಲಿ ಧರ್ಮಜಾಗೃತಿ ಉಪನ್ಯಾಸ ಏರ್ಪಡಿಸಲಾಗಿದ್ದು, ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ವೀರ ಸಂದೇಶ ನೀಡುವರು. ಅತಿಥಿಗಳಾಗಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ, ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ತುಳಸಿದಾಸ ನಾಯ್ಕ, ಸ್ವರ್ಣವಲ್ಲೀ ಸಂಸ್ಥಾನದ ಸಿದ್ದಿ ಸೀಮಾ ಪರಿಷತ್ ಅಧ್ಯಕ್ಷ ನಾರಾಯಣ ಸಿದ್ದಿ ಪಾಲ್ಗೊಳ್ಳುವರು .ಸಭಾ ಕಾರ್ಯಕ್ರಮದ ನಂತರ ಪುತ್ತೂರು ನರಸಿಂಹ ನಾಯಕ ಮತ್ತು ಸಂಗಡಿಗರಿAದ ಭಕ್ತಿ ಸಂಗೀತ ಕಾರ್ಯಕ್ರಮವಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಸಂಚಾಲಕ ಜಗದೀಶ ಪೂಜಾರಿ, ಉಪಾಧ್ಯಕ್ಷೆನಮಿತಾ ಬೀಡಿಕರ್, ಖಜಾಂಚಿ ಪ್ರದೀಪ ಯಲ್ಲಾಪುರಕರ್ ಪದಾಧಿಕಾರಿಗಳಾದ ಆದಿತ್ಯ ಗುಡಿಗಾರ, ಸುಧೀರ ಆಚಾರ್ಯ, ಶ್ರೀನಿವಾಸ ಗಾಂವಕರ್ ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...