
ಯಲ್ಲಾಪುರ : ಯುಗಾದಿ ಉತ್ಸವ ಪ್ರಯುಕ್ತ ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿ ಅಭೂತ ಪೂರ್ವವಾಗಿ ನೆರವೇರಿತು.
ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಕೇಸರಿ ಭಗವಾ ಧ್ವಜಗಳೋಂದಿಗೆ ರ್ಯಾಲಿಯಲ್ಲಿ ಭಾಗವಹಿದ್ದವು.

ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ಕೇಸರಿ ಹಾಗೂ ಶ್ವೇತ ವರ್ಣಧಾರಿಗಳಾಗಿ ರ್ಯಾಲಿಯಲ್ಲಿ ಭಾಗವಹಿಸಿ ರ್ಯಾಲಿ ಮೆರಗು ಹೆಚ್ಚಿಸಿದರು. ರ್ಯಾಲಿ ಸಾಗುವ ದಾರಿಯುದ್ದಕ್ಕೂ ಕೇಸರಿ ಧ್ವಜ ಹಾಗೂ ರಂಗೋಲಿ ತಳಿರು ತೋರಣಗಳಿಂದ ಸಿಂಗರಿಸಿದ್ದರಿಂದ ಸಂಪೂರ್ಣ ಪಟ್ಟಣವು ಕೇಸರೀಮಯವಾಗಿತ್ತು.

ಬೈಕ್ ರ್ಯಾಲಿಗೆ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಆದಿತ್ಯ ಗುಡಿಗಾರ್, ಸೋಮೇಶ್ವರ್ ನಾಯ್ಕ, ಸತೀಶ ನಾಯ್ಕ, ಪ್ರಮುಖರಾದ ಡಾ.ರವಿ ಭಟ್ ಬರಗದ್ದೆ, ಪ್ರದೀಪ ಯಲ್ಲಾಪುರಕರ್, ರಜತ್ ಬದ್ದಿ, ನಮಿತಾ ಬಿಡಿಕರ್ ಮುಂತಾದವರು ಇದ್ದರು.
ಸಿ.ಪಿ.ಐ. ಸುರೇಶ ಯಳ್ಳೂರ್, ಪಿಎಸ್ಐ ಗಳಾದ ಮಂಜುನಾಥ ಗೌಡರ್ ಮತ್ತು ಪ್ರಿಯಾಂಕಾ ನ್ಯಾಮಗೌಡ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಉತ್ಸವ ಸಮಿತಿಯ ಸದಸ್ಯರು ರ್ಯಾಲಿಯುದ್ದಕೂ ನಿಗಾ ವಹಿಸಿ, ವಾಹನ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ರ್ಯಾಲಿ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
Leave a Comment