ಯಲ್ಲಾಪುರ : ಹಿಂದೂಗಳ ಹೊಸ ವರ್ಷ ಯುಗಾದಿ ಪ್ರಯುಕ್ತ ಪಟ್ಟಣದಲ್ಲಿ ನಡೆದ ಭವ್ಯ ಶೋಭಾ ಯಾತ್ರೆಗೆ ೧3 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದರು.
ಯುಗಾದಿ ಉತ್ಸವ ಸಮಿತಿಯಿಂದ ಅಂಬೇಡ್ಕರ್ ನಗರದಲ್ಲಿರುವ ಕೋಟೆ ಕರಿಯವ್ವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಶೋಭಾ ಯಾತ್ರೆಯಲ್ಲಿ ಒಂದೇ ಬಣ್ಣದ ಸೀರೆಯುಟ್ಟ ಮಹಿಳೆಯರು .ಭಾಗವಹಿಸಿದ ವಿವಿಧ ಜಾನಪದ ತಂಡಗಳು, ಟ್ಯಾಬ್ಲೋಗಳು ಶೋಭಾ ಯಾತ್ರೆಯ ಮೆರಗನ್ನು ಹೆಚ್ಚಿಸಿದವು. ಮಹಿಳೆಯರಿಗೆ ಹಾಗೂ ಪುರುಷರಿಗೆಂದು ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಿದ್ದರಿಂದ, ಹಿಂದುತ್ವದ ಹಾಡುಗಳಿಗೆ ಹುಚ್ಚೆದ್ದು ಕುಣಿದರು. ಮೆರವಣಿಗೆ ದಾರಿಯುದ್ದಕ್ಕೂ ಕಿಕ್ಕೆರೆದು ಸೇರಿದ್ದ ಜನಸ್ತೋಮ, ರಸ್ತೆಯ ಅಕ್ಕಪಕ್ಕದಲ್ಲಿ ಕಟ್ಟಡದ ಮೇಲ್ಭಾಗಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊAಡರು.
ಮAಗಳೂರಿನ ಚೆಂಡೆ ವಾದ್ಯ, ಅಂಕೋಲಾದ ಝಾಂಜ್ ಹಾಗೂ ಕಲಾ ತಂಡ, ಕ್ರೇನ್ ಮೂಲಕ ಆಗಸದಲ್ಲಿ ಹಾರಾಡಿದ ಹನುಮ, ಕಟಪ್ಪ ಹಾಗೂ ಹೋರಿ, ಬೃಹತ್ ಗಾತ್ರದ ಹನುಮಾನ್ ವೇಶಧಾರಿ,ರಾಧಾಕೃಷ್ಣ, ಹನುಮನ ಗದೆ ಮೇಲೆ ರಾಮ , ಸುಗ್ಗಿ ಕುಣಿತದ ತಂಡ ಹಾಗೂ ಸ್ಥಳೀಯ ಸ್ಥಬ್ಧಚಿತ್ರಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.. ಶೋಭಾ ಯಾತ್ರೆಯಲ್ಲಿಯೂ ಸಹ ಪುನಿತ್ ರಾಜಕುಮಾರ ಕುರಿತಾದ ಪ್ರೇಮ ಕಾಣುತ್ತಿತ್ತು. ಅಭಿಮಾನಿಯೋರ್ವನು ಬೆನ್ನ ಮೇಲೆ ಅಪ್ಪುವಿನ ಚಿತ್ರ ರಚಿಸಿಕೊಳ್ಳುವ ಮೂಲಕ ತನ್ನ ಅಭಿಮಾನವನ್ನು ಸಾರಿದನು.
ಶೋಭಾ ಯಾತ್ರೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಗ್ರಾಮ ದೇವಿ ದೇವಸ್ಥಾನದ ಬಳಿ ಬಂದು ಸಂಪನ್ನಗೊAಡಿತು. ಮಾರ್ಗ ಮಧ್ಯೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಜನರಿಗೆ ಎಳ್ಳುನೀರುಪಾನಕ, ಹಣ್ಣಿನ ಸಲಾಡ್, ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದರು. ವಿಶೇಷವಾಗಿ ಮೊಹರಂ ಕಮಿಟಿಯ ವತಿಯಿಂದ ತಂಪಾದ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸುವ ಮೂಲಕ ಹಿಂದೂ ಮುಸ್ಲಿಂ ಸಾಮರಸ್ಯವನ್ನು ತೋರಿದರು.
ಪೊಲೀಸರು ಸಹ ಸಂಪೂರ್ಣ ಯಾತ್ರೆಯ ಮೇಲೆ ಹದ್ದಿನ ಕಣ್ಣಿಡುವ ಮೂಲಕ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ಮೂಲಕ ಶೋಭಾಯಾತ್ರೆಗೆ ತಮ್ಮ ಸಹಕಾರ ನೀಡಿದರು.
ಒಟ್ಟಿನಲ್ಲಿ ಕಳೆದರಡು ವರ್ಷ ಕೊರೆನಾ ಕರಿನೆರಳು ಬಿದ್ದು ಮಂಕಾಗಿದ್ದ ಹಬ್ಬಕ್ಕೆ ಈ ಬಾರಿ ವಿಜ್ರಂಭಣೆಯಿAದ ನೆರೆವೇರುವ ಮೂಲಕ ತನ್ನ ವೈಭತೆಯನ್ನು ಪುನಃ ಪಡೆದುಕೊಂಡಿತು ಯುಗಾದಿ ಎಂದರೆ ಎಲ್ಲರ ಚಿತ್ತ ಯಲ್ಲಾಪುರದತ್ತ ಎನ್ನುವ ಮಾತಿಗೆ ಪುಷ್ಟಿ ನೀಡಿತು.






ಶೋಭಯಾತ್ರೆಯಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಪಾಲ್ಗೊಂಡು, ಸಾರ್ವಜನಿಕರೊಂದಿಗೆ ಬೆರೆತು ಸಂಭ್ರಮಸಿದರು.

ಉತ್ಸವದ ಅಂಗವಾಗಿ ಸಿದ್ದಪಡಿಸಿದ ಟ್ಯಾಬ್ಲೂಗಳನ್ನು ವೀಕ್ಷಿಸಿದ ಸಚಿವರು, ಕ್ರೇನ್ ಮೂಲಕ ಹಾರಾಡುವ ಹನುಮಂತನ ವೇಶವನ್ನು ಧರಿಸಿದ್ದ ಮಾರುತಿ ಪ್ರಭು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ವಾಕರಸಾಸ ಅಧ್ಯಕ್ಷ ವಿ.ಎಸ್. ಪಾಟೀಲ್, ಯುವ ಮುಖಂಡ ವಿವೇಕ ಹೆಬ್ಬಾರ್ ಸಹ ಸಂಭ್ರಮದಲ್ಲಿ ಭಾಗವಹಿಸಿದರು.
Leave a Comment