
ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಅನುಷ್ಟಾನದಲ್ಲಿ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳ ಪರ ತೀವ್ರತರ ಜಾಗೃತ ಮೂಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ತಾಲೂಕಿನ ಮಲವಳ್ಳಿ , ವಜ್ರಳ್ಳಿ ವಲಯದ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನಿಗೆ ವ್ಯತಿರಿಕ್ತವಾಗಿ ಹಾಗೂ ಕಾನೂನಿನ ವಿಧಿ-ವಿಧಾನವನ್ನ ಅನುಸರಿಸದೇ ಅರಣ್ಯವಾಸಿಗಳ ಅರ್ಜಿಗಳನ್ನ ತೀರಸ್ಕರಿಸಲಾಗಿದೆ. ಸರಕಾರ ತೀವ್ರ ಗಮನ ಹರಿಸಬೇಕು. ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳು ರಾಜ್ಯದ ಇನ್ನೀತರ ಜಿಲ್ಲೆಗಳ ಸಮಸ್ಯೆಗಳಿಗಿಂತ ಭಿನ್ನವಾಗಿದೆ ಎಂದರು
ಗಣಪತಿ ಗೌಡ ನಿರ್ವಹಿಸಿದರು. ಅನಂತ ಎಸ್ ಗೌಡ ಸ್ವಾಗತಿಸಿದರು. ಶ್ರೀಪಾದ ಎನ್ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ವರದಮನಿ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಾಚಣ್ಣ , ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಹಲಗುಮನೆ ಮಾಚಣ್ಣ , ಸತ್ಯನಾರಾಯಣ ಹೆಗಡೆ, ಪ್ರಭಾಕರ ಕುಣಬಿ, ಸತೀಶ ಮರಾಠಿ, ಜಿಆರ್ ಗಾಂವಕರ ಕಾನೂರು ಮುಂತಾದವರು ಉಪಸ್ಥಿತರಿದ್ದರು.
Leave a Comment