ವಿಜಯಪುರ : ಚಲಿಸುತ್ತಿದ್ದ ಆಟೋ ಮೇಲೆ ಮರ ಉರುಳಿ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದು, ಐದು ಜನ ಗಂಭಿರವಾಗಿ ಗಾಯಗೊಂಡಿರುವ ಘಟನೆ ನಗರದ ಪೊಲೀಸ್ ತರಬೇತಿ ಕೇಂದ್ರದ ಬಳಿ ಸಂಭವಿಸಿದೆ.

ಮೃತಪಟ್ಟಿರುವ ಮಹಿಳೆ ತಾಲೂಕಿನ ಮದಬಾವಿ ತಾಂಡಾದ ಯಲ್ಲಮ್ಮ ಮಹಾದೇವಪ್ಪ ಕೊಂಡಗೊಳಿ (45) ಎಂದು ಗುರುತಿಸಲಾಗಿದೆ. ಇಬ್ಬರು ಮಹಿಳೆಯರು, ಆಟೋ ಚಾಲಕ ಸೇರಿದಂತೆ ಐದು ಜನರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ದರ್ಗಾ ಕ್ರಾಸ್‌ನಿಂದ ಸೊಲ್ಲಾಪುರ ರಸ್ತೆಯಲ್ಲಿ ಜೋರಾಪುರ ಕಡೆಗೆ ಆಟೋ ಹೊರಟಿತ್ತು.
ಆಟೋದಲ್ಲಿದ್ದವರು ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಪೊಲೀಸ್ ಕವಾಯತು ಮೈದಾನದ ಸಮೀಪದ ಬರುತ್ತಿದ್ದಂತೆ ಮರವೊಂದು ಆಟೋ ಮೇಲೆ ಉರುಳಿಬಿದ್ದು ಈ ಘಟನೆ ಸಂಭವಿಸಿದೆ.
Leave a Comment